ಆಂಗ್ಲ ಲೇಖಕ ಡೇಲ್ ಕಾರ್ನಗಿ ಅವರ ಕೃತಿಯನ್ನು ಲೇಖಕ ಟಿ.ಎನ್. ಜಯಕೃಷ್ಣ ಅವರು ‘ವೃತ್ತಿಯಲ್ಲಿ ಸಂತಸ, ಜೀವನದಲ್ಲಿ ಸಂತೃಪ್ತಿ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಬದುಕಿನಲ್ಲಿ ಸಂತೃಪ್ತಿಯನ್ನು ವೃತ್ತಿಯಲ್ಲಿ ಸಂತಸವನ್ನು ಕಾಣುವುದು ಎಲ್ಲರಿಂದಲೂ ಆಗದು. ಏಕೆಂದರೆ, ವೃತ್ತಿಯನ್ನು ಗ್ರಹಿಸುವ ರೀತಿಯೇ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ನಮಗೆ ಆಸಕ್ತಿ ಇರದ ವೃತ್ತಿಯಾದರೂ ಅದನ್ನು ವೃತ್ತಿಗೆ ಮಾತ್ರ ಸೀಮಿತಗೊಳಿಸಿ ಬದುಕನ್ನು ಪ್ರೀತಿಸುವತ್ತ ಗಮನ ಹರಿಸಬೇಕು. ತಪ್ಪಿದರೆ, ವೃತ್ತಿಯನ್ನೇ ಕಳೆದುಕೊಳ್ಳಬೇಕಾಗುತ್ತದೆ. ಬದುಕನ್ನು ಪ್ರೀತಿಸುವ ಗುಣ ಇದ್ದವರು ಮಾತ್ರ ಜೀವನ ಸಂತೃಪ್ತಿ ಕಾಣಲು ಸಾಧ್ಯ. ಈ ಬದುಕು ಎಷ್ಟೇ ಕಷ್ಟ ನೀಡಿದರೂ ಅದನ್ನು ಪ್ರೀತಿಸಬೇಕು. ತಪ್ಪಿದರೆ, ಸಂತೃಪ್ತಿ ಅಸಾಧ್ಯ. ಇಂತಹ ಅಂಶಗಳತ್ತ ಓದುಗರ ಗಮನ ಸೆಳೆಯುವ ಪ್ರೇರಣಾತ್ಮಕ ಬರಹಗಳು ಈ ಕೃತಿಯಲ್ಲಿವೆ.
©2025 Book Brahma Private Limited.