ಹಿಂದೆಂದೂ ಬಿಟ್ಟುಕೊಡದಷ್ಟು ರಹಸ್ಯಗಳನ್ನು ಸಾಗರಗಳು ಇಂದು ಬಿಟ್ಟುಕೊಡುತ್ತಿವೆ. ಅಮೂಲ್ಯ ಲೋಹಗಳು, ಬಹುಲೋಹಯುಕ್ತ ಗಂತಿಗಳ ಭಂಡಾರವೇ ಸಾಗರದಾಳದಲ್ಲಿ ಗುಪ್ತನಿಧಿಯಾಗಿ ಅಡಗಿ ಕುಳಿತು ಬಳಕೆಗಾಗಿ ಕಾದಿವೆ. ಲವಣದಿಂದ ಚಿನ್ನದವರೆಗೆ, ಪೆಟ್ರೋಲಿಯಂನಿಂದ ಯುರೇನಿಯಂವರೆಗೆ ತುಂಬಿ ಸಾಗರದ ಅಕ್ಷಯ ಪಾತ್ರೆ ತುಳುಕುತ್ತಿವೆ. ಇವೇ ನಾಳಿನ ಖನಿಜದ ಗಣಿಗಳು. ಅತ್ಯಾಕರ್ಷಕ ಹಾಗೂ ಸಮೃದ್ಧ ಚಿತ್ರಗಳನ್ನು ಒಳಗೊಂಡಿರುವ ಈ ಪುಸ್ತಕವನ್ನು ವಿಶೇಷವಾಗಿ ಜನಸಾಮಾನ್ಯರಿಗಾಗಿಯೇ ಬರೆಯಲಾಗಿದ್ದು, ಸಾಗರಗಳ ಕಾಲಾತೀತ ರಹಸ್ಯವನ್ನು ತೆರೆದಿಡುತ್ತದೆ. ಸಾಗರ ಉದಾರವಾಗಿ ನಮಗೆ ನೀಡುವ ನಿಕ್ಷೇಪಗಳ ವಿವರಗಳನ್ನು ಸುಂದರವಾಗಿ ಚಿತ್ರಿಸಲಾಗಿದೆ. ಸಾಗರ ಸಂಪನ್ಮೂಲವನ್ನು ಹೇಗೆ ಪರಿಗಣಿಸಬಹುದೆಂಬ ಮಾನವ ಪ್ರಯತ್ನಗಳ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ. ಮೂಲ ಇಂಗ್ಲಿಷ್ ಕೃತಿಯನ್ನು ಕನ್ನಡದ ಸೊಗಡು ಮೂಡುವಂತೆ ಟಿ.ಆರ್. ಅನಂತರಾಮು ಅನುವಾದಿಸಿದ್ದಾರೆ.
©2024 Book Brahma Private Limited.