ಮಾನವಪುತ್ರ ಯೇಸು

Author : ಟಿ.ಎನ್. ವಾಸುದೇವ ಮೂರ್ತಿ

Pages 292

₹ 243.00




Year of Publication: 2020
Published by: ಸಾಹಿತ್ಯ ಲೋಕ ಪಬ್ಲಿಕೇಷನ್ಸ್,
Address: ಬೆಂಗಳೂರು

Synopsys

ಲೇಖಕ ಟಿ.ಎನ್. ವಾಸುದೇವಮೂರ್ತಿ ಅವರು ಡಾ. ಗೂಳಪ್ಪ ವಕ್ಕುಂದ ಅವರ Kahlil Gibrans Jesus the Son of Man: His words and His deeds as told and recorded by those who knew Him ಸಂಶೋಧನಾ ಕೃತಿಯನ್ನುಮಾನವಪುತ್ರ ಯೇಸು (ಮಾನವಪುತ್ರ ಯೇಸು ಅವನನ್ನು ಕಣ್ಣಾರೆ ಕಂಡವರು ಯಥಾವತ್ತಾಗಿ ದಾಖಲಿಸಿರುವ ಅವನ ನಡೆ ನುಡಿಗಳು) ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. 

ಈ ಕೃತಿಯಲ್ಲಿ 79 ಅಧ್ಯಾಯಗಳಿವೆ. ಯೇಸುವಿನ ಚಾರಿತ್ರ್ಯದ ನಾನಾ ಮುಖಗಳ ಪರಿಚಯವಿದೆ. ಬೈಬಲ್ಲಿನಲ್ಲಿ ನಾಲ್ವರು ಇವಾಂಜಲಿಸ್ಟ್ ಗಳು (ಜಾನ್, ಮ್ಯಾಥ್ಯೂ, ಮಾರ್ಕ್, ಲ್ಯೂಕ್) ಯೇಸುವಿನ ಕಥೆ ಬರೆದಿದ್ದಾರೆ. ಜೆರುಸಲೇಮ್ ನಗರದ ಬೀದಿ ಬದಿಯ ಚಮ್ಮಾರ, ಯೇಸುವಿಗೆ ಊಟ ಬಡಿಸಿದ ಹೋಟೆಲ್ ಮಾಲೀಕ, ಹೆಸರಿರದ, ಗುರುತಿರದ ದಾರಿಹೋಕರು, ತುರುಗಾಹಿಗಳಿಂದ ಹಿಡಿದು ಯೇಸುವಿನ ತಾಯಿ (ಮೇರಿ), ಅಜ್ಜಿ (ಅನ್ನಾ), ಅವನ ಒಡಹುಟ್ಟಿದವರು, ಅವನ ಮಿತ್ರರು, ಶತ್ರುಗಳು, ಅವನನ್ನು ಹತ್ತಿರದಿಂದ ಕಂಡಿದ್ದ ಸೂಳೆಯರು, ಗುಲಾಮರು, ಸೈನಿಕರು, ಅವನ ಕೊಲೆಗೆ ಹುನ್ನಾರ ಮಾಡಿದವರು.. ಹೀಗೆ ಒಬ್ಬೊಬ್ಬರೂ ತಮ್ಮ ಸ್ಮೃತಿಕೋಶದಲ್ಲಿ ಜತನದಿಂದ ಕಾಪಾಡಿಕೊಂಡಿದ್ದ ಅವನ ಮಾತು, ಕತೆ, ನಡೆ ನುಡಿಗಳನ್ನು ಸ್ವಗತದ ಶೈಲಿಯಲ್ಲಿ ನುಡಿಯುತ್ತ ತಮ್ಮ ನೆನಪಿನ ಜೋಳಿಗೆಯನ್ನು ಓದುಗನೆದುರು ತೆರೆದಿಡುತ್ತಾರೆ.

ಇಲ್ಲಿಯ ಬಹುತೇಕ ಪಾತ್ರಗಳು (ಹಾಗೆಯೇ ಬಹುತೇಕ ವಾಕ್ಯಗಳು) ಬೈಬಲ್ ನಲ್ಲೂ ಕಾಣಿಸಿಕೊಳ್ಳುತ್ತವೆ. ಆದರೆ ಅವು ಬೈಬಲ್ ನಲ್ಲಿ ಯೇಸುವಿನ ಬಗ್ಗೆ ಏನನ್ನೂ ನುಡಿದಿಲ್ಲ. ದಾರ್ಶನಿಕ ಪ್ರತಿಭೆಯ ಕವಿ ಖಲೀಲ್ ಗಿಬ್ರಾನ್ ಅಂತಹ ಪಾತ್ರಗಳಿಗೆ ಈ ಕೃತಿಯಲ್ಲಿ ಧ್ವನಿ ನೀಡಿದ್ದಾರೆ. ಅಲ್ಲಿ ಆ ಪಾತ್ರಗಳು ನುಡಿಯದೇ ಹೋದ ಮಾತುಗಳನ್ನು ಇಲ್ಲಿ ನುಡಿಸಿದ್ದು ಈ ಕೃತಿಯ ಹೆಚ್ಚುಗಾರಿಕೆ ಎಂಬ ಪ್ರಶಂಸಾರ್ಹ ನುಡಿಗಳು ವಿಮರ್ಶೆ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತವೆ. 

About the Author

ಟಿ.ಎನ್. ವಾಸುದೇವ ಮೂರ್ತಿ
(30 December 1974)

ಟಿ.ಎನ್.ವಾಸುದೇವ ಮೂರ್ತಿ ಅವರು ಕಿ.ರಂ.ನಾಗರಾಜ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಅಲ್ಲಮ ಪ್ರಭುವಿನ ವಚನಗಳ ದಾರ್ಶನಿಕ ಮರುಚಿಂತನೆಯ ವಿಭಿನ್ನ ಸ್ವರೂಪಗಳು ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನದ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಶಸ್ತಿ ಸಂದಿದೆ. ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು ಪಡೆದ ಮೇಲೆ ಬೆಂಗಳೂರಿನ ಹಲವು ಪ್ರಮುಖ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನ್ಯಾಷನಲ್  ಕಾಲೇಜು, ಜೈನ್ ವಿಶ್ವವಿದ್ಯಾಲಯ ಕಾವ್ಯಮಂಡಲ ಮೊದಲಾದ ಕನ್ನಡ ಸ್ನಾತಕೋತ್ತರ ಕೇಂದ್ರಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಎಂ.ಎ. ಹಾಗೂ ಎಂ.ಫಿಲ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಓಶೋ ನೇರ ಶಿಷ್ಯರಾದ ಸ್ವಾಮಿ ಆನಂದ್ ಪ್ರಭಾವದಿಂದ ದೀಕ್ಷೆ ...

READ MORE

Related Books