ಲೇಖಕರಾದ ಭಾರತೀದೇವಿ ಪಿ. ಹಾಗೂ ಸತೀಶ್ ಜಿ. ಟಿ. ಅವರು ಅನುವಾದಿಸಿರುವ ಕೃತಿ ನನ್ನ ದೂರು ಕೇಳಿ. ಮಹಿಳೆಯರು ನ್ಯಾಯಾಲಯದ ಕದ ತಟ್ಟಿದಾಗ ಎಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. ನ್ಯಾಯಮೂರ್ತಿ ಚಂದ್ರುರವರ ಈ ಮೂಲ ಕೃತಿಯಲ್ಲಿ ಮಹಿಳೆಯರಿಗೆ ಸಂಬಂಧಿಸಿದ 20 ಪ್ರಮುಖ ತೀರ್ಪುಗಳನ್ನು ಪ್ರಸ್ತಾಪಿಸಿದ್ದಾರೆ . ಈ ತೀರ್ಪುಗಳ ಪರಿಣಾಮವಾಗಿ ಹಲವು ಕಾನೂನುಗಳು , ತಿದ್ದುಪಡಿಗಳು ಮತ್ತು ಮಹಿಳಾ ಪರ ಹೋರಾಟಗಳಿಗೆ ದಾರಿ ಮಾಡಿಕೊಟ್ಟಿದ್ದನ್ನು ಕಾಣಬಹುದು . ಇಂದು ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳನ್ನು ಏಕವ್ಯಕ್ತಿ ಹೋರಾಟಕ್ಕಿಂತ ಸಂಘಟಿತ ಹೋರಾಟಗಳ ಮೂಲಕ ಎದುರಿಸಬೇಕಾಗಿದೆ . ಈ ಹೋರಾಟ ಕೇವಲ ರಾಜಕೀಯ ಹೋರಾಟವಾಗಿರದೆ , ಆರ್ಥಿಕ , ಸಾಮಾಜಿಕ ಮತ್ತು ಸಾಂಸ್ಕೃತಿಕ ಹೋರಾಟವಾಗಬೇಕಾಗಿದೆ . ನ್ಯಾಯಮೂರ್ತಿ ಚಂದ್ರುರವರ ಈ ಕೃತಿಯಿಂದ ಕಾನೂನು ಹೋರಾಟವು ಮಹತ್ತರವಾದುದು ಅಂತ ತಿಳಿಯುತ್ತದೆ . ಈ ಕೃತಿ ಮಹಿಳಾ ಸಬಲೀಕರಣದ ದೃಷ್ಟಿಯಿಂದ ಮಹತ್ತರವಾದದ್ದು .
©2024 Book Brahma Private Limited.