ಅಂಟಾರ್ಕ್ಟಿಕದ ಕಥೆ

Author : ಟಿ. ಆರ್. ಅನಂತರಾಮು

Pages 50




Year of Publication: 2011
Published by: ರಾಷ್ಟ್ರೀಯ ಅಂಟಾರ್ಕ್‍ಟಿಕ ಮತ್ತು ಸಾಗರ ಸಂಶೋಧನ ಕೇಂದ್ರ
Address: ಗೋವಾ ಹಾಗೂ ಭಾರತೀಯ ಭೂವೈಜ್ಞಾನಿಕ ಸಂಘ, ಬೆಂಗಳೂರು

Synopsys

ಅಂಜು ತಿವಾರಿ, ಕೆ.ಪಿ. ಕೃಷ್ಣನ್ ಮತ್ತು ರಸಿಕ್ ರವೀಂದ್ರ ಅವರ ಮೂಲ ಕೃತಿಯನ್ನು ಭೂವಿಜ್ಞಾನಿ, ಲೇಖಕ ಟಿ.ಆರ್. ಅನಂತರಾಮು ಅವರು ಕನ್ನಡೀಕರಿಸಿದ ಕೃತಿ-ಅಂಟಾರ್ಕ್ಟಿಕದ ಕಥೆ .

ಏಳನೆಯ ಮಹಾಖಂಡ ಎಂದು ಕರೆಯುವ ಅಂಟಾರ್ಕ್‍ಟಿಕ ಯಾವೊಂದು ದೇಶಕ್ಕೂ ಸೇರದ ಭೂಮಿಯ ಮೇಲಿನ ಏಕೈಕ ಸ್ಥಳ. ಅದು ಶಾಂತಿ, ಪ್ರಶಾಂತತೆ ಮತ್ತು ವಿಜ್ಞಾನಕ್ಕೇ ಮೀಸಲಾದ ಖಂಡ. ಸದ್ಯದಲ್ಲಿ ಚಾಲ್ತಿಯಲ್ಲಿರುವ ಅಂಟಾರ್ಕ್‍ಟಿಕ ಒಪ್ಪಂದವು ನಮ್ಮ ಭೂತಾಯಿಗೆ ಸಂಬಂಧಿಸಿದಂತೆ ಈಗಿರುವ, ಪರಿಹಾರ ಕಾಣದ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಜಾಗತಿಕ ವಿಜ್ಞಾನಿ ಸಮುದಾಯಕ್ಕೆ ಅವಕಾಶ ಕಲ್ಪಿಸಿಕೊಡುತ್ತದೆ, ಜನಸಾಮಾನ್ಯರು, ವಿಶೇಷವಾಗಿ ತರುಣ ಜನಾಂಗ ಈ ಖಂಡದ ಬಗ್ಗೆ ಜಾಗತಿಕ ದೃಷ್ಟಿಕೋನದಿಂದ ಅದರ ಪಾತ್ರವೇನು ಎಂಬುದನ್ನು ಹೆಚ್ಚು ಅರಿತುಕೊಳ್ಳಬೇಕಾಗಿದೆ. ಮಕ್ಕಳಿಗೆ ಆಕರ್ಷಕವಾಗುವ ರೀತಿಯಲ್ಲಿ ಅಂಟಾರ್ಕ್‍ಟಿಕದ ಚಾರಿತ್ರಿಕ ಮತ್ತು ವೈಜ್ಞಾನಿಕ ಅಂಶಗಳನ್ನು ತಿಳಿಯಾಗಿ ಹಾಗೂ ಪರಿಣಾಮಕಾರಿಯಾಗಿ ನಿರೂಪಿಸುವುದು ಈ ಮಾಹಿತಿಕೋಶದ ಮೂಲ ಉದ್ದೇಶ. ಇಲ್ಲಿಯ ಅನುವಾದ ಮೂಲ ಕೃತಿಯೇನೋ ಎನ್ನುವ ಮಟ್ಟಿಗೆ ಕನ್ನಡದಲ್ಲಿ ಆ ಸೊಗಡನ್ನು ಹಿಡಿದಿಟ್ಟಿದೆ. ಪುಟಪುಟದಲ್ಲೂ ಯಥೇಚ್ಚವಾಗಿ ಚಿತ್ರಗಳನ್ನು ನೀಡಿದೆ. ಈ ಕೃತಿಗೆ ಬೆಲೆಯನ್ನು ನಿಗದಿ ಪಡಿಸಿಲ್ಲ.

 

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books