ಆಂಗ್ಲ ಲೇಖಕ ರಿಚರ್ಡ್ ಕಾರ್ಲಸನ್ ಅವರ ಕೃತಿಯನ್ನು ಲೇಖಕ ಎಸ್.ಉಮೇಶ ಅವರು ‘ಎಷ್ಟು ಸೊಗಸು ಈ ಬದುಕು...! ಎಂಬ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಬದುಕೆಂಬ ಸಾವಿರ ವಿಸ್ಮಯಗಳ ಲೋಕದೊಳಗೊಂದು ಪಯಣ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಬದುಕಿನ ಸ್ವರೂಪ-ಸ್ವಭಾವಗಳ ಬಗ್ಗೆ ಬಹು ಹಿಂದಿನಿಂದಲೂ ಚರ್ಚೆಯಾಗುತ್ತಲೇ ಬಂದಿದೆ. ಪ್ರಚೀನ ಕವಿಗಳು, ಚಿಂತಕರು ಮಾತ್ರವಲ್ಲ; ಉಪನಿಷತ್ತುಗಳ ಮೂಲಕವೂ ಬದುಕಿನ ಪ್ರಸ್ತಾಪವಾಗಿದೆ. ಬಂದಂತೆ ಸ್ವೀಕರಿಸುವುದು ಬದುಕು ಎಂದಾದರೆ, ಬದುಕಿಗೆ ಸ್ವರೂಪ ನೀಡುವವರೇ ಮನುಷ್ಯರು ಎಂದು ಅಭಿಪ್ರಾಯ ಮತ್ತೊಂದೆಡೆ. ವಿಧಿ ನಿರ್ಧರಿಸಿದಂತೆ ಬದುಕು ರೂಪು ಪಡೆಯುತ್ತದೆ. ಮನುಷ್ಯನ ಪ್ರಯತ್ನದಲ್ಲಿ ಬದುಕು ರೂಪುಗೊಳ್ಳದು ಅಥವಾ ಆ ಬದುಕು ಮನುಷ್ಯನ ನಿಯಂತ್ರಣದಲ್ಲಿರದು ಎಂದೆಲ್ಲಾ ಚರ್ಚೆಗೆ ಒಳಗಾಗಿದ್ದು ಮಗದೊಂದು ಕಡೆ. ಕೆಲವರಿಗೆ ಬದುಕು ಸುಂದರವಾಗಿ ಕಂಡರೆ ಮತ್ತೊಬ್ಬರಿಗೆ ಕುರೂಪಿಯಾಗಿ, ವಿಕೃತವಾಗಿ ಕಂಡಿದೆ. ಈ ಕೃತಿಯಲ್ಲಿ, ಲೇಖಕರು ಬದುಕಿನ ಸೌಂದರ್ಯ ಕುರಿತು ವರ್ಣಿಸಿದ್ದಾರೆ. ಅದರ ಧನಾತ್ಮಕ ಅಂಶಗಳ ಕುರಿತು ಚರ್ಚಿಸಲಾಗಿದೆ.
©2024 Book Brahma Private Limited.