ಲೇಖಕ ಪಾಲ್ ಬ್ರಂಟನ್ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು ಗಿರಿಜಾಶಾಸ್ತ್ರಿ ಅವರು ಕನ್ನಡಕ್ಕೆ ಅನುವಾದಿಸಿದ ಲೇಖನಗಳ ಸಂಗ್ರಹ ಕೃತಿ. ಭಾರತದ ಹಿರಿಮೆ-ಗರಿಮೆಯ ಎತ್ತರಗಳನ್ನು ತೋರುವ ಮೂಲಕ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆ ಕುರಿತ ಕೃತಿ. ಜ್ಞಾನಮೂಲದಿಂದ ಭಾರತವು ವಿಶ್ವಕ್ಕೆ ಮಾದರಿಯಾಗಿದ್ದು, ಬದುಕಿನ ಸಾರ್ಥಕತೆಯನ್ನು ಸರಳವಾಗಿ ಹೇಳಿದ್ದು, ಇದರಷ್ಟು ಶ್ರೀಮಂತ ಜ್ಞಾನ ಬೇರೆ ಯಾವ ಧರ್ಮದಲ್ಲೂ ಕಾಣಸಿಗದು. ವಿಶ್ವದ ವಿಶೇಷ ಜ್ಞಾನವನ್ನು ಬಗೆದಷ್ಟು ಆಳವಾಗುತ್ತಾ ಹೋಗುವ ಭಾರತೀಯ ಸಂಸ್ಕೃತಿಯು ವಿದೇಶಿಗರಿಗೆ ಅಚ್ಚರಿ ಮಾಡಿಸಿದ್ದು ಮಾತ್ರವಲ್ಲ; ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದಲೂ ಇಂತಹ ಅಪಾರ ಜ್ಞಾನ ಭಂಡಾರವನ್ನು ಹೇಗೆ ಒಳಗೊಂಡಿತು ಎಂಬ ಬಗ್ಗೆಯೂ ಅಚ್ಚರಿ ಮೂಡಿಸುತ್ತದೆ. ಇಂತಹ ಸಂಗತಿಗಳಿರುವ ಕೃತಿಯ ವಿಶೇಷತೆ.
©2025 Book Brahma Private Limited.