‘ಕನ್ಹಯ್ಯಲಾಲ್ ರಂಗಭೂಮಿ’ ಮೂಲ ರುಸ್ತುಂ ಭರೂಚಾ ಅವರ ಕೃತಿ. ಬಿ.ಆರ್. ವೆಂಕಟರಮಣ ಐತಾಳ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.. ಹೈಸ್ನಾಮ್ ಕನ್ಹಯ್ಯಲಾಲ್ ನೇತೃತ್ವದ ಕಲಾಕ್ಷೇತ್ರ ಮಣಿಪುರ ರಂಗತಂಡವು ಸಮಕಾಲೀನ ಭಾರತೀಯ ರಂಗಭೂಮಿಯ ಸಂದರ್ಭದಲ್ಲಿ ಅತ್ಯುತ್ತಮ ಪ್ರಯೋಗಗಳಿಗೆ ದೃಷ್ಟಾಂತವಾಗಿದೆ. ಅವರ ಕೃತಿಗಳಲ್ಲಿಯ ಶಾಬ್ದಿಕೇತರ ಹಾಗೂ ಮುದ್ರಾಭಿನಯದ ಭಾಷೆಯೇ ಅವರ ಪ್ರದರ್ಶನ ಪಠ್ಯಗಳನ್ನು ಅನುವಾದಿಸುವುದಕ್ಕಿಂತ ವಿವರವಾಗಿ ದಾಖಲಿಸುವ ಕೃತಿಯಾಗಿ ಮೂಡಿಬಂದಿದೆ. ಕನ್ಹಯ್ಯಲಾಲ್ ಅವರ ಎರಡು ಮುಖ್ಯ ರಂಗಕೃತಿಗಳನ್ನು ದಾಖಲಿಸತೊಡಗಿದಾಗ, ಅನಿವಾರ್ಯವಾಗಿ ನಾಟಕ ಕೃತಿಗಳನ್ನು ಮಾತ್ರವಲ್ಲದೆ, ಅವುಗಳ ದಾರ್ಶನಿಕ ಹಿನ್ನೆಲೆಗಳನ್ನು ಹುಡುಕಬೇಕಾಯಿತು. ಅವರ ಕೃತಿಗಳ ಹಿಂದಿರುವ ರಾಜಕೀಯ, ಸಾಂಸ್ಕೃತಿಕ, ಕುಲಸಂಬಂಧೀ ಪ್ರೇರಣೆಗಳನ್ನು ಒಳಗೊಂಡ ರಂಗಸಾಧನೆಯ ಇತಿಹಾಸ ಇಲ್ಲಿದೆ.
©2025 Book Brahma Private Limited.