ಹಿರಿಯ ಪತ್ರಕರ್ತ ಲೇಖಕ ವಿಶ್ವೇಶ್ವರ ಭಟ್ ಅವರ ಅನುವಾದಿತ ಕೃತಿ- ʻಆವಿಷ್ಕಾರದ ಹರಿಕಾರ: ಬುದ್ಧಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿʼ ಮೂಲ ಅಮೇರಿಕದ ಉದ್ಯಮಿ ಲೇಖಕ ಅವಿ ಯೋರಿಶ್ ರಚಿಸಿರುವ Thou Shalt Innovate ಕೃತಿ. ವಿಶ್ವದ 40 ಕ್ಕೂ ಹೆಚ್ಚೂ ಭಾಷೆಗಳಿಗೆ ಅನುವಾದಗೊಂಡಿದೆ. ಇಸ್ರೇಲ್ ಎಂಬ ಪುಟ್ಟ ದೇಶ ಜಗತ್ತನ್ನು ಸುಂದರ ತಾಣವನ್ನಾಗಿ ರೂಪಿಸಲು ಪಟ್ಟು ಹಿಡಿದು ಕುಳಿತಿರುವುದು ಏಕೆ? ಜಗತ್ತಿನಾದ್ಯಂತ ನೂರಾರು ಕೋಟಿ ಜನರ ಬದುಕನ್ನು ಇಸ್ರೇಲಿನ ಅದ್ಭುತ ಆವಿಷ್ಕಾರಗಳು ಹೇಗೆ ಬದಲಿಸುತ್ತಿವೆ ಎಂಬುದನ್ನು ಈ ಕೃತಿ ಕಟ್ಟಿಕೊಡುತ್ತದೆ.
ವಿವಿಧ ಆವಿಷ್ಕಾರಗಳನ್ನು ನಡೆಸಿ ವಿಶ್ವಕ್ಕೇ ಮಾದರಿಯಾಗಿ, ದಾರಿ ದೀಪವೂ ಆಗಿರುವ ನಾನಾ ಆವಿಷ್ಕಾರಗಳನ್ನು ಮಾಡಿರುವ 15 ಸಾಧಕರನ್ನು ಲೇಖಕರು ಪರಿಚಯಿಸಿದ್ದಾರೆ. ಈ ಪುಸ್ತಕ ಕೇವಲ ಸಾಧಕರ ಪರಿಚಯದ ದಾಖಲೆಯಾಗದೆ, ಅವರ ಸಾಧನೆಯ ಹಾದಿ ಅವರು ಅದೆಷ್ಟು ಕಷ್ಟಪಟ್ಟು ಗುರಿಯನ್ನು ಮುಟ್ಟಿದ್ದಾರೆ ಎಂಬುದನ್ನು ವಿವರಿಸಿದ್ದಾರೆ. ಜಗತ್ತಿಗೆ ಇಸ್ರೇಲ್ ನೀಡಿದ ಕೊಡುಗೆಗಳನ್ನ ವಿವರಿಸಿದ್ದಾರೆ.
©2025 Book Brahma Private Limited.