‘ಗುಂಡಿಗೆಯ ಬಿಸಿರಕ್ತ: ಆಫ್ರಿಕನ್ ಸಂಕಥನ’ ಸಂಸ್ಕೃತಿ, ಸಮಾಜ, ರಾಜಕೀಯ ಮತ್ತು ಮೌಖಿಕ ದಾರ್ಶನಿಕತೆಯ ಪ್ರಬಂಧಗಳನ್ನು ಲೇಖಕ ಕೇಶವ ಮಳಗಿ ಅವರು ಕನ್ನಡೀಕರಿಸಿದ್ದಾರೆ. ಇದೊಂದು ಸಾಂಸ್ಕೃತಿಕ ಸಂಕಥನ. ಭಾಷೆ, ಸಾಹಿತ್ಯ, ಸಮಾಜ, ರಾಜಕಾರಣ, ಜೀವಪರಿಸರ, ಸಾಮುದಾಯಿಕ ದಾರ್ಶನಿಕತೆ, ಲಿಂಗ-ಸಂವೇದನೆ ಹಾಗೂ ಸಿದ್ಧಾಂತಗಳು ಹೇಗೆ ಬಹುತ್ವದ ಸಂಸ್ಕೃತಿಗಳನ್ನು ಕಟ್ಟುತ್ತವೆ ಎಂಬುದನ್ನು ಶೋಧಿಸುವ ಕೃತಿ. ಆಧುನಿಕತೆ ಮತ್ತು ಶಿಷ್ಟ ಪರಂಪರೆ ಮಾತ್ರ ಜ್ಞಾನವನ್ನು ಸೃಷ್ಟಿಸುವ ಆಕರಗಳು ಎಂಬ ಹುಸಿ ನಂಬಿಕೆಯನ್ನು ವಿಸರ್ಜಿಸಿ ಮೌಖಿಕ ಪರಂಪರೆಯ ದಾರ್ಶನಿಕತೆಯನ್ನು ನಮ್ಮದಾಗಿಸಿಕೊಳ್ಳುವ ಮುಕ್ತತೆಯನ್ನು ತೋರಬೇಕು. ಮೌಖಿಕ ಪರಂಪರೆಯ ಬಹು ಬಗೆಯ ಹೊರಸುರಿಗಳನ್ನು ಸಾಮುದಾಯಿಕ ಕಲಾಪ್ರಜ್ಞೆ ರೂಪಿಸಿದ ದಾರ್ಶನಿಕತೆಯೆಂದು ಒಪ್ಪಿಕೊಳ್ಳಬೇಕು ಎಂಬ ಪ್ರಸ್ತಾವನೆಗಳನ್ನು ಈ ಕೃತಿಯಲ್ಲಿ ಕಾಣುತ್ತೇವೆ. ಮೌಖಿಕ ಪರಂಪರೆಯ ಪ್ರಕಾರಗಳಿಂದ ಹೇಗೆ ಜಾನಪದ ಮೀಮಾಂಸೆಯನ್ನು ಕಟ್ಟುವುದು ಎಂಬುದನ್ನು ಎತ್ತಿ ತೋರಿಸುವ ಬರಹಗಳು ಇಲ್ಲಿವೆ.
©2025 Book Brahma Private Limited.