ಲೇಖಕಿ ವೈ.ಎಸ್.ಗಾಯತ್ರೀ ಅವರ ಅನುವಾದಿತ ಕೃತಿ-‘ಭಾರತೀಯ ಸಂಸ್ಕೃತಿಯ ಮಹತ್ತ್ವ ಮತ್ತು ವೈಶಿಷ್ಟ್ಯ’ ಮೂಲ ಎಸ್. ಕೆ. ಓಝಾ ಅವರು ಭಾರತೀಯ ಸಂಸ್ಕೃತಿಯನ್ನು ಕುರಿತು ಹಿಂದಿಯಲ್ಲಿ ರಚಿಸಿದ್ದ ಈ ಗ್ರಂಥವನ್ನು ಲೇಖಕಿಯು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕೃತಿ ಕುರಿತು ಸಾಹಿತಿ ಎಸ್. ರಂಗನಾಥ್ ಅವರು, ‘ಭೂಮಿಕಾ, ಆಧುನಿಕ ಜೀವನ ಮತ್ತು ಸನ್ನಿಹಿತ ಸಮಸ್ಯೆಗಳು, ಆಧುನಿಕ ಸಮಸ್ಯೆಗಳ ಪರಿಹಾರಾನ್ವೇಷಣೆ, ಭಾರತೀಯ ಸಂಸ್ಕೃತಿಯ ವಿಶ್ವಸನೀಯತೆ, ಪರೀಕ್ಷೆ, ಮತ್ತು ವಿಶಿಷ್ಟತೆ, ಭಾರತೀಯ ಸಾಂಸ್ಕೃತಿಕ ಜ್ಞಾನದ ಅಡೆತಡೆಗಳು, ಭಾರತೀಯ ಸಂಸ್ಕೃತಿಯಲ್ಲಿನ ವಿವೇಚನೆ, ಮಾನವೀಯ ಸದ್ಗುಣಗಳು, ಮುಖ್ಯ ತತ್ತ್ವಗಳು, ಕರ್ಮ ಮತ್ತು ಜ್ಞಾನ, ಧರ್ಮದ ಅವಧಾರಣೆ ಮತ್ತು ಅದರ ಮಹತ್ವ, ಸಾಧಕನ ಜೀವನದ ವಿಶಿಷ್ಟ ಸಾಧನೆಗಳು, ಪರಮ ಪುರುಷಾರ್ಥದ ಸಿದ್ಧಿಗಾಗಿ ಮಾರ್ಗೋಪಾಯ, ಭಾರತೀಯ ಸಂಸ್ಕೃತಿಯ ಪ್ರಕಾರಮಾನ ತತ್ತ್ವ, ಸಾರಾಂಶ ಎಂಬ ಹದಿನಾರು ಅತ್ಯುಪಯುಕ್ತ ಶೀರ್ಷಿಕೆಗಳಿಂದ ಕೂಡಿದೆ. ದರ್ಶನ ಶಾಸ್ತ್ರಗಳು, ಶ್ರೀಮದ್ಭಾಗವತ ಮಹಾಪುರಾಣ, ಭಗವದ್ಗೀತೆ, ಶಾಂಕರ ಭಾಷ್ಯಯುತ ಉಪನಿಷತ್, ಬ್ರಹ್ಮಸೂತ್ರಭಾಷ್ಯಗಳ ಹಿನ್ನೆಲೆಯಲ್ಲಿ 65 ವರ್ಷಗಳಲ್ಲಿ ಬಂದಿರುವ ಗೋರಖ್ ಪುರ್ ಗೀತಾ ಪ್ರೆಸ್‌ನ “ಕಲ್ಯಾಣ” ಮಾಸಪತ್ರಿಕೆಯ ಆಧಾರವೇ ಅಲ್ಲದೆ, ಅನೇಕ ಸಾಧು ಸಂತರೊಡನೆ ನಡೆಸಿದ ಸಂವಾದದ ಹಿನ್ನೆಲೆಯಲ್ಲಿ, ಹಾಗೂ ಸ್ವಾನುಭವದಿಂದ ರಚಿತವಾದ ವಿಶ್ವಕೋಶದಂತಿರುವ ಪ್ರತಿಯೊಬ್ಬ ಭಾರತೀಯನೂ, ಅದರಲ್ಲೂ ಪ್ರಮುಖವಾಗಿ ಯುವ ಪೀಳಿಗೆಯವರು ಓದಿ, ಸ್ವಾನುಭವಕ್ಕೆ ತಂದುಕೊಳ್ಳಲು ಅತ್ಯುಪಯುಕ್ತವಾದ ಭಂಡಾರ ಈ ಕೃತಿಯಾಗಿದೆ ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.