ಡೇಲ್ ಕಾರ್ನಗಿ ಅವರು ಬರೆದ ಆಂಗ್ಲ ಕೃತಿಯನ್ನು ಲೇಖಕ ಟಿ.ಎನ್. ಜಯಕೃಷ್ಣ ಅವರು ‘ಚಿಂತೆ ಬಿಡಿ: ಹೊಸ ಬದುಕು ಆರಂಭಿಸಿ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಚಿಂತೆಯು ಚತೆಗಿಂತಲೂ ಭೀಕರ. ಚಿತೆಯು ಶವವನ್ನು ಸುಟ್ಟರೆ ಚಿಂತೆಯು ಜೀವಂತ ಮನುಷ್ಯನನ್ನೇ ಸುಡುತ್ತದೆ. ಆದ್ದರಿಂದ, ಚಿಂತೆಯನ್ನು ನಿರ್ಲಕ್ಷಿಸಿ, ಬದುಕನ್ನು ಪ್ರೀತಿಸುವಂತೆ ಲೇಖಕರ ಜೀವನೋತ್ಸಾಹದ ಬರಹಗಳು ಇಲ್ಲಿವೆ. ಇದರಿಂದ, ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣುವಂತಾಗುತ್ತದೆ. ಅದಕ್ಕಾಗಿ ಮನುಷ್ಯನು ತನ್ನ ಬದುಕಿನ ವೈಚಾರಿಕ ಶೈಲಿಯನ್ನು ಬದಲಿಸಿಕೊಳ್ಳಬೇಕು. ಹೊಸ ಮನೋಧರ್ಮದೊಂದಿಗೆ ಮುನ್ನಡೆಯಬೇಕು ಎಂಬುದೇ ಪ್ರಮುಖ ಸಲಹೆಯಾಗಿದೆ.
©2025 Book Brahma Private Limited.