‘ತುರ್ತು ಪರಿಸ್ಥಿತಿಯ ಕರಾಳ ಮುಖ’ ಕೃತಿಯು ಸಾರಾ ಅಬೂಬಕರ್ ಅವರ ಅನುವಾದಿತ ಕಥನವಾಗಿದೆ. ಸ್ವತಂತ್ಯ್ರ ಭಾರತದ ಚರಿತ್ರೆಯ ಕಪ್ಪು ಚುಕ್ಕೆಯಂತಿರುವ ತುರ್ತು ಪರಿಸ್ಥಿತಿಯ ಕೊನೆಗೊಂಡು ಇಪ್ಪತ್ತೈದು ವರ್ಷಗಳಾದರೂ ಅದರ ಕಹಿನೆನಪುಗಳು ಇನ್ನೂ ಮಾಸಿಲ್ಲ. ಅನೇಕ ಅಮಾಯಕರ ಸಾವುನೋವಿಗೆ ಕಾರಣವಾದ ತುರ್ತು ಪರಿಸ್ಥಿತಿಯ ಪ್ರಜಾಪ್ರಭುತ್ವದ ಅಡಿಗಲ್ಲನೇ ಅಲ್ಲಾಡಿಸಿದ ಕರಾಳ ಸಂದರ್ಭ. ಆ ಕರಾಳ ದಿನಗಳಲ್ಲಿ ಕೇರಳದ ಅಮಾಯಕ ವಿದ್ಯಾರ್ಥಿಯೊಬ್ಬ ವ್ಯವಸ್ಥೆಯ ಕಬಂಧ ಬಾಹುಗಳಿಗೆ ಬಲಿಯಾದದ್ದು, ಮಗ ನಾಪತ್ತೆಯಾಗಿರುವನೆಂದು ತಿಳಿದು ಅವನನ್ನು ಹುಡುಕಲು ವೃದ್ಧ ತಂದೆಯೊಬ್ಬ ಪಟ್ಟ ಪಡಿಪಾಟಲುಗಳ ಕಥನ ‘ತುರ್ತು ಪರಿಸ್ಥಿತಿಯ ಕರಾಳ ಮುಖ’ ಕೃತಿಯಾಗಿದೆ.
©2025 Book Brahma Private Limited.