ಭಾರತೀಯ ಸ್ವಾತಂತ್ರ್ಯದ ಇತಿಹಾಸ

Author : ಪ್ರಹ್ಲಾದ ಎಂ. ಕುಳಗೇರಿ

Pages 280

₹ 125.00




Year of Publication: 2012
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019
Phone: 9945036300

Synopsys

ಭಾರತೀಯ ಸ್ವಾತಂತ್ರ್ಯದ ಇತಿಹಾಸ ಅಂಕಣ ಬರಹಗಳ ಪುಸ್ತಕದ ಮೂಲ ಹಿಂದಿ ಭಾಷೆಯಲ್ಲಿದ್ದು, ಈ ಕೃತಿಯನ್ನು ಲೇಖಕ ಪ್ರಹ್ಲಾದ ವೆಂ. ಕುಳಗೇರಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಿಂದಿಯಲ್ಲಿ ಈ ಕೃತಿಯನ್ನು ಕಾಕತಕರ್‌ ಅವರು ರಚಿಸಿದ್ದಾರೆ. ಈ ಪುಸ್ತಕವು ಮಕ್ಕಳ ಸಾಹಿತ್ಯವಾಗಿದ್ದು, 1857ರಿಂದ 1947ರವರೆಗಿನ, ಸ್ವಾತಂತ್ರ್ಯಪ್ರಾಪ್ತಿಗಾಗಿ ಪಟ್ಟ ಪ್ರಯಾಸಗಳ ಉಜ್ಜ್ವಲ, ರೋಚಕ, ಪ್ರೇರಣಾದಾಯಕ ಕಥನ ಓದುಗರಿಗೆ ಈ ಹೊತ್ತಿಗೆ ನೀಡುತ್ತದೆ. ಇಂದಿನ ಪೀಳಿಗೆಗೆ ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಕುರಿತು ಸಂಕ್ಷಿಪ್ತವಾಗಿ ಪರಿಚಯಿಸುವ ಮೂಲಕ ಅವರಲ್ಲಿ ರಾಷ್ಟ್ರಪ್ರೇಮ ಹಾಗೂ ಸ್ವದೇಶಾಭಿಮಾನವನ್ನು ಜಾಗೃತಗೊಳಿಸುವ ಪ್ರಯತ್ನವಾಗಿ ‘ಭಾರತೀಯ ಸ್ವಾತಂತ್ರ್ಯದ ಇತಿಹಾಸ’ ಪುಸ್ತಕ ಹೊರಬಂದಿದೆ. 1960ರ ದಶಕದಲ್ಲಿ ಕಿಶೋರ-ತರುಣಾವಸ್ಥೆಯ ಹೊಸಪೀಳಿಗೆಯನ್ನು ಉದ್ದೇಶಿಸಿ ಮರಾಠಿ ನಾ.ವಿ. ಕಾಕತಕರ್ ರಚಿಸಿ, ಪುಣೆಯ ಪ್ರಸಿದ್ಧ ಮರಾಠಿ ದೈನಿಕ ’ತರುಣ್ ಭಾರತ್’ ಅಂಕಣರೂಪದಲ್ಲಿ ಪ್ರಕಟಿಸಿದ ಜನಪ್ರಿಯ ಲೇಖನಮಾಲೆಯ ಕನ್ನಡ ರೂಪಾಂತರವೇ ‘ಭಾರತೀಯ ಸ್ವಾತಂತ್ರ್ಯದ ಇತಿಹಾಸ’.

Related Books