ಮಹಾಡ್ : ಮೊದಲ ದಲಿತ ಬಂಡಾಯ

Author : ಎಂ. ಅಬ್ದುಲ್ ರೆಹಮಾನ್ ಪಾಷಾ

Pages 274

₹ 180.00




Year of Publication: 2020
Published by: ಕ್ರಿಯಾ ಪ್ರಕಾಶನ
Address: 12, ಥಾನಪ್ಪ ಗಾರ್ಡನ್, 18ನೇ ಅಡ್ಡರಸ್ತೆ, ಸಂಪಂಗಿ ರಾಮನಗರ, ಬೆಂಗಳೂರು-560027
Phone: 08022234369

Synopsys

ಮರಾಠಿಯ ಪ್ರಸಿದ್ಧ ಲೇಖಕ ಡಾ. ಆನಂದ ತೇಲ್ತುಂಬ್ಡೆ ಅವರ ‘ಮಹಾಡ್ : ಮೊದಲ ದಲಿತ ಬಂಡಾಯ' ಈ ಕೃತಿಯನ್ನು ಲೇಖಕ ಪ್ರೊ. ಅಬ್ದುಲ್ ರೆಹಮಾನ ಪಾಷಾ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಹಾಡ್ ಕೆರೆ ಚಳವಳಿ, ಕೋರೆಗಾಂವ್ ದಾಳಿ ಇತ್ಯಾದಿ ಸನ್ನಿವೇಶಗಳು ದಲಿತರ ಚಳವಳಿಯ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದವು ಮಾತ್ರವಲ್ಲ; ದಲಿತರ ಸ್ವಾಭಿಮಾನವನ್ನು ಬಡಿದೆಬ್ಬಿಸುವ ಸೂಕ್ತ ಪ್ರೇರಣೆಗಳೂ ಆಗಿವೆ. ಅವು ನೈಜ ಭಾರತೀಯರ ಬದುಕಿನ ಆಶಯಗಳಿಗಾಗಿ ನಡೆದ ಹೋರಾಟವೂ ಆಗಿವೆ. ಮಹಾಡ್ ಸನ್ನಿವೇಶ, ಚಳವಳಿ, ಆಶಯ, ದಲಿತರ ಐಕ್ಯತೆಯಲ್ಲಿ ಬಂದ ನೂತನ ವಿಚಾರಗಳ ಬಲವೂ ಆಗಿದೆ. ಇಂತಹ ಇತಿಹಾಸದ ದಾಖಲೆಯನ್ನು ಪುನರ್ ನೆನಪಿಸುವ ಕೃತಿಯಾಗಿ ಈ ಕೃತಿ ಮಹತ್ವದ್ದು ಎನಿಸುತ್ತದೆ.

About the Author

ಎಂ. ಅಬ್ದುಲ್ ರೆಹಮಾನ್ ಪಾಷಾ

ಸಿನಿಮಾ, ಮಾಧ್ಯಮ ಮತ್ತು ವಿಜ್ಞಾನಗಳಿಗೆ ಸಂಬಂಧಿಸಿದಂತೆ  ಬರೆಯುವ ಅಬ್ದುಲ್ ರೆಹಮಾನ್ ಪಾಷಾ ಕನ್ನಡ ಲೇಖಕರು. ಗಾಂಧೀ ನೆಹರೂ ಆಯ್ದ ಪತ್ರಗಳು, ಅಭಿವೃದ್ಧಿ ಸಂವಹನ ಕೌಶಲ್ಯಗಳು, ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಪೋಷಕರ ಜವಾಬ್ದಾರಿ, ವೈಜ್ಞಾನಿಕ ಮನೋವೃತ್ತಿ ಮಕ್ಕಳ ಹಕ್ಕು, ಶಿಕ್ಷಕರ ಹೊಣೆ, ನಿಮ್ಮ ಉಚ್ಚಾರಣೆ, ಧ್ವನಿಯನ್ನು ಸುಧಾರಿಸಿಕೊಳ್ಳಿ, ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಬಗೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿಶ್ವಮಾನ್ಯರು ಜೀವನ ಚರಿತ್ರೆ ಮಾಲೆಯಲ್ಲಿ ಮಹಾತ್ಮ ಗಾಂಧಿ, ಟೀಪು ಸುಲ್ತಾನ, ಜವಾಹರಲಾಲ್ ನೆಹರೂ, ಪ್ರವಾದಿ ಮುಹಮ್ಮದ್ ಕಿರುಹೊತ್ತಿಗೆಗಳು ಮುದ್ರಣ ಕಂಡಿವೆ. ನಂಬಿಕೆ ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ’ ಕೃತಿಗೆ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ ‘ಕಾವ್ಯನಂದ’ ಪ್ರಶಸ್ತಿ (2015), ಶಿವಮೊಗ್ಗದ ...

READ MORE

Related Books