ಮಾಸ್ತಿಯವರ ಜನಪ್ರಿಯ ನಾಟಕ ’ಕಾಕನಕೋಟೆ’. ಚಲನಚಿತ್ರವಾಗಿಯೂ ಜನಪ್ರಿಯವಾಗಿರುವ ಕೃತಿಯಿದು. 1938ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿದ್ದ ಈ ನಾಟಕವು ನಂತರ ಹಲವು ಮುದ್ರಣ ಕಂಡಿದೆ.
ಕಾಕನಕೋಟೆ ಎಂಬುದು ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲ್ಲೂಕಿನ ಒಂದು ಸ್ಥಳ. ಅದರ ಸುತ್ತಲ ಪ್ರದೇಶದ ಕಾಡನ್ನು ಕಾಕನಕೋಟೆ ಕಾಡು ಎಂದು ಗುರುತಿಸಲಾಗುತ್ತದೆ. ಕಾಡುಕುರುಬರು ಎಂಬ ಸಮುದಾಯದ ಜನ ಈ ಪ್ರದೇಶದ ನಿವಾಸಿಗಳು. ಹೆಗ್ಗಡದೇವನ ಕೋಟೆಯ ಹೆಗ್ಗಡೆ ಹಾಗೂ ಹಾಡಿಯ ಜನರ ನಡುವಿನ ಮುಖಾಮುಖಿ ಈ ನಾಟಕದ ವಸ್ತು. ಕಪ್ಪದ ವಿಷಯದಲ್ಲಿ ಉಂಟಾದ ವಿವಾದವನ್ನು ಈ ಸಮುದಾಯದ ಕಾಚನೆಂಬುವನು ಮೈಸೂರಿನಲ್ಲಿದ್ದು ರಾಜರನ್ನು ಬಲ್ಲವನಾಗಿದ್ದ, ಅವರ ಸಹಾಯದಿಂದ ತನ್ನ ಜನರನ್ನು ಕಷ್ಟದಿಂದ ಪಾರು ಮಾಡಿಸಿದ ಕತೆಯಿದು.
©2024 Book Brahma Private Limited.