ಕೋಲಿಯ ಮತ್ತು ಶಾಕ್ಯರ ನಡುವೆ ಹರಿಯುವ ರೋಹಿಣಿ ಹಂಚಿಕೆಯ ಪ್ರಶ್ನೆ ಉದ್ಭವಿಸಿ, ಯುದ್ಧ ಸನ್ನಿವೇಶ ನಿರ್ಮಾಣವಾಗುವುದರಿಂದ ನಾಟಕ ಆರಂಭವಾಗುತ್ತದೆ. ಸಿದ್ಧಾರ್ಥನ ತಾತ್ವಿಕ ಜಿಜ್ಞಾಸೆ, ಗೃಹತ್ಯಾಗ, ಸಾಧನೆಯಲ್ಲಿಯ ಅಡ್ಡಿಗಳು, ಅನುಕೂಲಗಳು, ಕೊನೆಗೆ ಸಿದ್ಧಾರ್ಥ ಬದುಕಿನ ಸತ್ಯವನ್ನು ಕಂಡುಕೊಂಡು ಗೌತಮಬುದ್ಧನಾಗುವ ಪರಿ ಇತ್ಯಾದಿಗಳನ್ನು ಈ ನಾಟಕ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ.
ನಾರಾಯಣ ಘಟ್ಟ ಅವರ ಈ ನಾಟಕ ಸಾವಿರಾರು ವರ್ಷಗಳಿಂದ ಮನುಷ್ಯ ಬದುಕಿಗೆ ಆವರಿಸಿಕೊಂಡಿರುವ ಅಜ್ಞಾನ, ಅಂಧಾನುಕರಣೆ, ಸ್ಪೃಶ್ಯ- ಅಸ್ಪೃಶ್ಯರೆಂಬ ಭೇದ, ಸ್ತ್ರೀ-ಪುರುಷರಲ್ಲಿಯ ಶ್ರೇಷ್ಠ-ಕನಿಷ್ಟ ಭಾವಗಳನ್ನು ತೊಡೆದು, ಮನುಷ್ಯರಷ್ಟೇ ಅಲ್ಲ ಸಕಲ ಜೀವರಾಶಿಗಳು, ಸಮಾನತೆಯಿಂದ, ಶಾಂತಿಯಿಂದ ಹಾಗೂ ನೆಮ್ಮದಿಯಿಮದ ಬದುಕಲು ಸ್ವತಂತ್ರವಾದವು ಎಂದು ಸಾರುವ ಬುದ್ಧನ ನಡೆಯನ್ನು ಸಾರುತ್ತದೆ.
©2024 Book Brahma Private Limited.