ಈ ನಾಟಕದ ಒಂದು ವಿಶಿಷ್ಟ ಪದಪ್ರಯೋಗ. ಆಚಾರ್ಯ ಶಂಕರ ಮತ್ತು ಅಂಥವರು ಇಂಥ ಯಾತ್ರೆ ಮಾಡುತ್ತಾ ಹೊರಟು ಭಾರತ ನೋಡಿದರು. ಅದು ಕೇವಲ ಭಾರತ ನೋಡುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ತಮ್ಮ ಯಾತ್ರೆಯ ಮೂಲಕ ವಿವಿಧ ಬಗೆಬಗೆಯ ಜೀವಿಗಳು ಸಂಪರ್ಕವೇ ಇಲ್ಲದೆ ಬದುಕುತಿರುವ ಈ ನೆಲಕ್ಕೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಭೂಮಿಗೆ ಭಾರತ ಅನ್ನುವ ಹೆಸರು ಕೊಟ್ಟರು. ಆದ್ದರಿಂದಲೇ ಭಾರತಯಾತ್ರೆ ಅಂದರೆ ಅದು ಭಾರತವನ್ನು ಕಾಣುವ ಯಾತ್ರೆ ಮಾತ್ರವಲ್ಲ; ಭಾರತವನ್ನು ಕಟ್ಟುವ ಯಾತ್ರೆಯೂ ಹೌದು. ಇದು ನಮ್ಮ ಭಾರತಯಾತ್ರೆಯೂ ಹೌದು; ಭಾರತವೇ ಸ್ವತಃ ನಡೆಸುತ್ತಿರುವ ಯಾತ್ರೆಯೂ ಹೌದು.
©2024 Book Brahma Private Limited.