ಪ್ರೊ, ಸಂಪಿಗೆ ತೋಂಟದಾರ್ಯ ಅವರು ಬರೆದಿರುವ 'ಬೆಳಕ ಬಿತ್ತುವ ಬದುಕು' ನಾಟಕ ಈ ಕಾಲದ ನಮ್ಮ ಧಾರ್ಮಿಕ ನೆಲೆಗಟ್ಟನ್ನು ಹೆಚ್ಚು ಅರ್ಥಪೂರ್ಣವಾಗಿಸುವಲ್ಲಿ ಬಹಳ ಮಹತ್ವದ ಕೃತಿಯಾಗಿದೆ. ಭಗವದ್ಭಕ್ತಿಯ ಹೆಸರಿನಲ್ಲಿ ರೂಪಿಸಿಕೊಂಡಿರುವ ಕೆಲವೊಂದು ಅಜ್ಞಾನದ ಪರದೆಯನ್ನು ಸರಿಸಿ ಜ್ಞಾನದ ಬೆಳಕು ಹರಿಸುವ ಈ ಕೃತಿಯು ಮಹಾಭಾರತದ ಕಥೆಯನ್ನು ಆಧರಿಸಿದೆಯಾದರೂ ಅದರ ನಿರೂಪಣೆ ಕಾಲಾತೀತವಾಗಿ ರೂಪುಗೊಂಡಿದೆ. ಮತಪಂಥಗಳ ಮಿತಿಗಳನ್ನು ಮೀರಿ ಆಧುನಿಕತೆಯ ನೆಲೆಯಲ್ಲಿ ಎಲ್ಲರಿಗೂ ಹತ್ತಿರವಾಗುವ ಅದ್ಭುತವಾದ ಜ್ಞಾನದ ಎಳೆಯೊಂದನ್ನು ಎತ್ತಿತೋರುವ ಪ್ರಯತ್ನ ಈ ನಾಟಕದಲ್ಲಿದೆ. ವೈಜ್ಞಾನಿಕ ವಿಚಾರಧಾರೆಯೊಂದಿಗೆ ಆಧ್ಯಾತ್ಮದ ಒಳಹೊಕ್ಕವರಿಗೆ ಮಾತ್ರ ತೆರೆದುಕೊಳ್ಳಬಹುದಾದ ಜ್ಞಾನದ ತಿಳಿವೊಂದನ್ನು ಈ ಮೂಲಕ ನಾಟಕಕಾರರು ಜನಸಾಮಾನ್ಯರೆಲ್ಲರಿಗೂ ಮುಟ್ಟುವಂತೆ ಮಾಡಿರುತ್ತಾರೆ. ಮಾಂಸ ಮಾರುವಾತನೊಬ್ಬ ಮಹರ್ಷಿ ಎಂದೆನಿಸಿಕೊಂಡಾತನಿಗೆ ತಿಳಿಹೇಳುವ ಧರ್ಮರಹಸ್ಯದ ಕಥೆಯನ್ನು ಆಧರಿಸಿ ಬರೆದಿರುವ ಈ ನಾಟಕ, ಸಾಹಿತ್ಯ ಲೋಕದ ಮುಕುಟಮಣಿಯಾಗುವ ಯೋಗ್ಯತೆ ಉಳ್ಳದ್ದು ಎಂಬ ಅನಿಸಿಕೆ ನನ್ನದಾಗಿದೆ ಎನ್ನುತ್ತಾರೆ ತೀರ್ಥರಾಮ ವಳಲಂಬೆ.
©2024 Book Brahma Private Limited.