ಅರಹಂತ

Author : ಎಸ್. ರಾಮನಾಥ

Pages 88

₹ 75.00




Year of Publication: 2002
Published by: ಅಭಿನವ ಪ್ರಕಾಶನ
Address: ಮುಖ್ಯರಸ್ತೆ, ಮಾರೇನಹಳ್ಳಿ, 17/18-2, 1ನೇ ವಿಜಯನಗರ, ಬೆಂಗಳೂರು -560040
Phone: 9448804905

Synopsys

ಭಗವಾನ್ ಮಹಾವೀರರ ಎರಡು ಸಾವಿರದ ಆರುನೂರನೆಯ ಜನ್ಮಕಲ್ಯಾಣ ಮಹೋತ್ಸವದ ಅಂಗವಾಗಿ ಜೈನಧರ್ಮ ಮತ್ತು ಭಗವಾನ್ ಮಹಾವೀರರ ವಿಚಾರ ಹಾಗೂ ಉಪದೇಶಗಳನ್ನೊಳಗೊಂಡ ನಾಟಕವಾಗಿ ’ಅರಹಂತ’ ರಚನೆಯಾಗಿದೆ.

ಇತಿಹಾಸದ ಸಣ್ಣ ಎಳೆಯನ್ನು ಆಧಾರವಾಗಿಟ್ಟುಕೊಂಡು ಬೆಳೆಸಿರುವ ಈ ನಾಟಕವು ಹಿಂಸೆ-ಪ್ರತಿಹಿಂಸೆ, ಅಹಿಂಸೆಯ ಚಿತ್ರಣವನ್ನು ಕೊಡುವ ಒಂದು ಪ್ರಯತ್ನವಾಗಿದೆ.

’ಅರಹಂತ’ ಪ್ರಾಚೀನ ಭಾರತ ಇತಿಹಾಸದ ಒಂದು ಎಳೆಯನ್ನು ರೇಖಿಸುತ್ತಾ , ಹಿಂಸಾಮೀಮಾಂಸೆಯ ಭೀಕರ ವರ್ಣ ಛಾಯೆಗಳನ್ನು ತುಂಬುತ್ತಾ ಆಕರ್ಷಕವಾದ ಚಿತ್ರವನ್ನು ಕಟ್ಟಿಕೊಡುತ್ತದೆ.

ಈ ನಾಟಕದ ಅಂಶವಾಗಿರುವುದು ಅಹಿಂಸೆಯ ದರ್ಶನವಾದ, ಜೈನಧರ್ಮದ ಅನುಯಾಯಿಯಾದ ಖಾರವೇಲ ಪ್ರತೀಕಾರಕ್ಕಾಗಿ ಹಿಂಸೆಯ  ಆವಾಹನೆ ಮಾಡಿಕೊಂಡು ಕ್ರೂರಿಯಾಗುವುದರಲ್ಲಿ ಎನ್ನುವುದನ್ನು ಈ ನಾಟಕ ಕಟ್ಟಿಕೊಡುತ್ತದೆ.

Related Books