ಬೀchi ಅವರ ನೂರೈವತ್ತು ನಗೆ ಬರಹಗಳ ಸಂಕಲನ ’ತಿಂಮನ ತಲೆ’. ಇದನ್ನು ಮೊದಲು ಪ್ರಕಟಿಸಿದ್ದು ಬಳ್ಳಾರಿಯ ತಿಂಮ ಸಾಹಿತ್ಯ ಮಾಲೆ.
ಪಾಟೀಲ ಪುಟ್ಟಪ್ಪ ಅವರು ಕೃತಿಗೆ ಮುನ್ನುಡಿ ಬರೆಯುತ್ತಾ, ’ಉಲ್ಲಾಸವೇ ಐಶ್ವರ್ಯ' ಎನ್ನುವ ರಶಿಯಾದ ಗಾದೆ ಮಾತು ಶ್ರೀ 'ಬೀchi'ಯವರಿಗೆ ಅಕ್ಷರಶಃ ಅನ್ವಯಿಸುತ್ತದೆ. ಅವರಿಗೆ ಇರುವುದು ಅದೊಂದೇ ಸಂಪತ್ತು!’ ಎಂದಿದ್ದಾರೆ.
ಬೀchiಯವರು ಸೃಷ್ಟಿಸಿದ ಹಾಸ್ಯ ಪಾತ್ರ ’ತಿಂಮ’. ಅವನು ದಡ್ಡನೂ ಹೌದು, ದಾರ್ಶನಿಕನೂ ಹೌದು. ಬೀchi ಅವರು ಕಂಡುಂಡ ವ್ಯಂಗ್ಯ, ವಿಡಂಬನೆ, ಹಾಸ್ಯ, ವಿಷಾದಗಳ ಮೂರ್ತರೂಪದಂತೆ ತಿಂಮ ಕಾಣುತ್ತಾನೆ.
©2024 Book Brahma Private Limited.