ಡಿಪ್ಲೊಮಾ ಪಾಲಿಟೆಕ್ನಿಕ್ ನ 3ನೇ ಮತ್ತು 4ನೇ ಸೆಮಿಸ್ಟರ್ ತರಗತಿಯ ವಿದ್ಯಾರ್ಥಿಗಳಿಗೆ ತಾವು ಅಭ್ಯಾಸ ಮಾಡುವ ವೃತ್ತಿಪರ ವಿಷಯಗಳ ಜೊತೆಗೆ ಕನ್ನಡ ಸಾಹಿತ್ಯ ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ತಾಂತ್ರಿಕ ಕನ್ನಡ ಪಠ್ಯವನ್ನು ಅಳವಡಿಸಲಾಗಿದೆ.
ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಾದ ಕತೆ, ಕವನ, ವೈಚಾರಿಕ-ವೈಜ್ಞಾನಿಕ ಚಿಂತನೆ, ಕ್ರೀಡೆ, ಪರಿಸರ ಮುಂತಾದ ಆಸಕ್ತಿದಾಯಕ ವಿಚಾರಗಳನ್ನು ಪಠ್ಯದಲ್ಲಿ ಒದಗಿಸಲಾಗಿದೆ. ವಿದ್ಯಾರ್ಥಿಗಳ ಭಾಷಾ ಕೌಶಲ್ಯವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಭಾಷಾ ಚಟುವಟಿಕೆಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಮನೋವಿಕಾಸಕ್ಕೆ ಸಹಕಾರಿಯಾಗುವಂತೆ ಈ ಕೃತಿಯನ್ನು ರಚಿಸಲಾಗಿದೆ. ಅಶೋಕಕುಮಾರ್ ರಂಜೆರೆ ಹಾಗೂ ಕೆ.ವೈ. ನಾರಾಯಣಸ್ವಾಮಿ ಒಟ್ಟಾಗಿ ಕೃತಿ ರಚಿಸಿದ್ದಾರೆ. ಈ ಕೃತಿಯು ನಾಲ್ಕು ಮುದ್ರಣಗಳನ್ನು ಕಂಡಿದೆ.
©2024 Book Brahma Private Limited.