ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಮೌಲ್ಯಯುತ ಶಿಕ್ಷಣ ಕೊಡುವಲ್ಲಿ ಸೋತಿದೆ. ಈ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಿ ತನ್ಮೂಲಕ ವಿಮರ್ಶಾತ್ಮಕ ಬೋಧನಾ ವಿಧಾನವೊಂದನ್ನು ಅಳವಡಿಸುವ ಅಗತ್ಯದ ಕುರಿತು ಮಾತನಾಡಿದ್ದಾರೆ ಲೇಖಕ ಮಹಾಬಲೇಶ್ವರ ರಾವ್.
ಇಂದಿನ ಶಾಲಾ ಸಂದರ್ಭದಲ್ಲಿ ವಿದ್ಯಾರ್ಥಿ ಕೇವಲ ಕೇಳುಗ ಮಾತ್ರವಾಗಿದ್ದು ಪ್ರಶ್ನಿಸುವ ಹಕ್ಕಿನಿಂದ ವಂಚಿತನಾಗಿದ್ದಾನೆ. “ಕೈಕಟ್ಟು ಬಾಯ್ಮುಚ್ಚು” “ಹೇಳಿದ್ದು ಮಾತ್ರ ಕೇಳು” ಎಂಬಂತಹ ವ್ಯವಸ್ಥೆಯಿದ್ದು ಅದನ್ನು ಮೀರಬೇಕಿರುವ ವಿಚಾರಗಳು ಈ ಕೃತಿಯಲ್ಲಿ ಕಾಣಸಿಗುತ್ತವೆ. ‘ವಿದ್ಯಾರ್ಥಿಗಳು ಒಂದೇ ರೀತಿಯ ಅಚ್ಚಿನಲ್ಲಿ ಬೆಂದು ಬಂದ ಕೇಕ್ ಮಾದರಿಯ ನಿರ್ಮಾಣದಂತಾಗಿದ್ದಾರೆ’ ಎನ್ನುತ್ತಾರೆ ಲೇಖಕರು. ವಿದ್ಯಾರ್ಥಿಯನ್ನು ಸರ್ವೋತ್ಕೃಷ್ಟ ಪ್ರಜೆಯನ್ನಾಗಿಸುವಂಥ ವಿಮರ್ಶಾತ್ಮಕ ಬೋಧನಾ ವಿಧಾನದ ಅಗತ್ಯವನ್ನು ಈ ಕೃತಿಯಲ್ಲಿ ಹೇಳಲಾಗಿದೆ.
©2025 Book Brahma Private Limited.