ಸಾರ್ವಜನಿಕ ಗ್ರಂಥಾಲಯಗಳಿಗಿಂತ ಶಾಲಾ ಕಾಲೇಜಗಳ ಗ್ರಂಥಾಲಯಗಳು ಹೇಗೆ ಭಿನ್ನವಿರಬೇಕು ಎಂಬುದನ್ನು ಲೇಖಕ ಸಂಗಮನಾಥ ರೇವತಗಾಂವ್ ಅವರು ತಮ್ಮದೇ ಆದ ವಿಚಾರದೊಂದಿಗೆ ಸಮರ್ಥಿಸಿಕೊಂಡ ಬರೆಹಗಳು ಇಲ್ಲಿವೆ. ಸಾರ್ವಜನಿಕ ಗ್ರಂಥಾಲಯಗಳಲ್ಲಿ ಸಾಮಾನ್ಯವಾಗಿ ಕುಂದುಕೊರತೆಗಳು ಕಂಡು ಬರುವಂತೆ ಶಾಲಾ ಕಾಲೇಜುಗಳ ಗ್ರಂಥಾಲಯಗಳಲ್ಲೂ ಇದ್ದು, ಅವನ್ನು ಸರಿಪಡಿಸದಿರುವ ಆಡಳಿತ ಮಂಡಳಿಗಳ ನಿರ್ಲಕ್ಷ್ಯವನ್ನು ದಾಖಲಿಸಿದ್ದಾರೆ. ಮಾದರಿಯಾದ ಗ್ರಂಥಾಲಯಗಳು ಹೇಗಿರುತ್ತವೆ ಎಂಬ ಬಗ್ಗೆಯೂ ಅವರು ಕೆಲ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಶಾಲಾ ಕಾಲೇಜುಗಳ ಗ್ರಂಥಾಲಯಗಳು ಸುಸಜ್ಜಿತವಾಗಿಲ್ಲದಿದ್ದರೆ ಅದರ ಪರಿಣಾಮಗಳೇನೂ ಎಂಬುದನ್ನೂ ಸಹ ವಿವರಿಸಿ, ಎಚ್ಚರಿಸಿದ್ದಾರೆ. ಆರೋಗ್ಯಕರ ಗ್ರಂಥಾಲಯಗಳಿಗೆ ಇದೊಂದು ಆಕರ ಗ್ರಂಥ ಎನ್ನುಬಹುದು
©2025 Book Brahma Private Limited.