ಕಲಿಕೆಯ ಹೆಜ್ಜೆಗಳು

Author : ಆರ್. ಬಿ. ಗುರುಬಸವರಾಜ

Pages 104

₹ 110.00




Year of Publication: 2020
Published by: ಸಾಹಿತ್ಯ ಲೋಕ ಪ್ರಕಾಶನ
Address: #745, 12ನೇ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು - 10
Phone: 9945939436

Synopsys

ಕಲಿಕೆಯ ಹೆಜ್ಜೆಗಳು-ಆರ್. ಬಿ. ಗುರುಬಸವರಾಜ ಅವರ ಕೃತಿ. ಶಾಲೆಯಲ್ಲಿ ಮಾತ್ರ ಶಿಕ್ಷಣ  ದೊರೆಯುತ್ತದೆಯೇ? ಪೋಷಕರು ಮಕ್ಕಳಿಗೆ ಹೇಗೆ ಶಿಕ್ಷಣ ನೀಡಬಹುದು? ಕಲಿಕೆಯ ವೈವಿಧ್ಯಮಯ ರೂಪಗಳಾವುವು? ಮಕ್ಕಳ ಕುತೂಹಲ ಮತ್ತು ಆಸಕ್ತಿಯುತ ಕಲಿಕೆಗೆ ಪೋಷಕರು ಹೇಗೆ ಬೆಂಬಲ ನೀಡಬಹುದು? ಮಗು ಕಲಿಕೆಯಲ್ಲಿ ಪ್ರಯಾಸ ಪಡುವುದನ್ನು ತಪ್ಪಿಸುವ ಮಾರ್ಗಗಳೇನು? ಮಕ್ಕಳ ಕಲಿಕಾ ಅನುಭವಗಳನ್ನು ಗಟ್ಟಿಗೊಳಿಸುವುದು ಹೇಗೆ? ಮಕ್ಕಳ ಮನಸ್ಸನ್ನು ಅರಿಯುವ ವಿಧಾನಗಳು ಯಾವುವು? ಮನೆಯಲ್ಲಿ ಮಗುಸ್ನೇಹಿ ವಾತಾವರಣ ಏಕಿರಬೇಕು ಮತ್ತು ಹೇಗಿರಬೇಕು? ಮಕ್ಕಳ ಭವಿಷ್ಯದ ಕಲಿಕೆಯನ್ನು ಉನ್ನತೀಕರಿಸುವ ಅಂಶಗಳನ್ನು ಪಾಲಕರು ಹೇಗೆ ಅನುಸರಿಸಬೇಕು? ಮಕ್ಕಳ ಕಲಿಕಾ ಕೊರತೆಗಳನ್ನು ಪಾಲಕರು ಪತ್ತೆ ಹಚ್ಚುವುದು ಹೇಗೆ? ಮಕ್ಕಳಲ್ಲಿ ಒತ್ತಡ ರಹಿತ ಮನೋವಿಕಾಸ ಹೇಗೆ? ಪರೀಕ್ಷೆಗಳು ಕೇವಲ ಅಂಕ ಗಳಿಸುವ ಪ್ರಕ್ರಿಯೆಗಳೆ? ಮುಂತಾದ ಪ್ರಶ್ನೆಗಳಿಗೆ ಈ ಪುಸ್ತಕ ಮಾರ್ಗದರ್ಶಿ. ಇದು ಕೇವಲ ಪಾಲಕರಿಗಷ್ಟೇ ಅಲ್ಲ ಶಿಕ್ಷಕರಿಗೂ ಶಿಕ್ಷಣಾಸಕ್ತರಿಗೂ, ಟಿ.ಇ.ಟಿ ಮತ್ತು ಸಿ.ಇ.ಟಿ ಪರೀಕ್ಷಾರ್ಥಿಗಳಿಗೂ ಉಪಯುಕ್ತ.

About the Author

ಆರ್. ಬಿ. ಗುರುಬಸವರಾಜ
(20 July 1974)

ವೃತ್ತಿಯಲ್ಲಿ ಶಿಕ್ಷಕರಾಗಿರುವ ಆರ್.ಬಿ.ಗುರುಬಸವರಾಜ್, ಪ್ರವೃತ್ತಿಯಲ್ಲಿ ಲೇಖಕರು ಹೌದು. ಶಿಕ್ಷಣ, ವಿದ್ಯಾರ್ಥಿಗಳ ವೈಜ್ಞಾನಿಕ ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ ಇವರು ಬರೆದಿರುವ ಹಲವಾರು ಲೇಖನಗಳು ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಶಿಕ್ಷಣ ಲೇಖನಗಳ ಸಂಗ್ರಹ "ನೀವೂ ಸ್ಟಾರ್ ಆಗಿ", ಶಿಕ್ಷಕರ ಕೈಪಿಡಿ "ಯೋಚನೆ ಬಿಡಿ ಯೋಜನೆ ಮಾಡಿ", ಮಕ್ಕಳ ಕಿರುಕಾದಂಬರಿ "ಪಾಪ್ ಕಾರ್ನ್ ಪಾಪಜ್ಜಿ" ಸಂಪಾದಿತ ಕೃತಿ "ನೆಲದ ಮರೆಯ ನಿಧಾನ" ಎಂಬ ನಾಲ್ಕು ಪುಸ್ತಕಗಳು ಪ್ರಕಟವಾಗಿವೆ. ...

READ MORE

Related Books