ಲೇಖಕಿ ಬಿ.ಎಸ್. ಶೈಲಜಾ ಅವರ ಕೃತಿ-ಏನು ಗಣಿತ ಅಂದ್ರಾ...? ಕೆಲವರಿಗೆ ಗಣಿತ ಏಂದರೆ ಕಬ್ಬಿಣದ ಕಡಲೆ. ಕೆಲವರಿಗೆ ಅದೊಂದು ಮೋಜಿನ, ಕುತೂಹಲದ ಆಟ. ಗಣಿತದಂತಹ ಕ್ಲಿಷ್ಟ ಸಮಸ್ಯೆಗಳನ್ನು ಶೀಘ್ರ ಹಾಗೂ ಸರಳವಾಗಿ ಬಗೆಹರಿಸಿಕೊಳ್ಳಲು ಸರಳ ಸೂತ್ರಗಳೂ ಇರುತ್ತವೆ. ಈ ಸೂತ್ರಗಳನ್ನು ಅನ್ವಯಿಸಿದಾಗಲೂ ಕೆಲವೊಮ್ಮ ಸಮಸ್ಯೆ ಬಗೆಹರಿಯದು. ಹೀಗಾಗಿ, ಗಣಿತ ಎಂದರೆ ಬೇಸರ ಮಾಡಿಕೊಳ್ಳುವವರೇ ಜಾಸ್ತಿ. ದಿನನಿತ್ಯದ ಜೀವನದಲ್ಲಿ ಗಣಿತ ಅಗತ್ಯ. ದೈನಂದಿನ ವ್ಯವಹಾರಗಳ ಮೂಲಕ ಗಣಿತವನ್ನು ನಮಗರಿವಿಲ್ಲದಂತೆ ಬೋಧಿಸುವ ಪುಸ್ತಕವಿದು. ಕತೆ ಹೇಳುತ್ತಲೇ ನಾವು ಮಕ್ಕಳಿಗೆ ಒಳ್ಳೆಯ ನಡತೆ ಕಲಿಸುವುದಿಲ್ಲವೇ ಹಾಗೆ ? ಗಣಿತವೆಂದರೆ ನಿದ್ದೆಯಲ್ಲೂ ಬೆಚ್ಚಿಬೀಳುವ ವಿದ್ಯಾರ್ಥಿಗಳಿಗೆ ಹೇಳಿ ಬರೆಸಿದಂತೆ ಬಹಳ ಸ್ವಾರಸ್ಯಕರವಾಗಿ ನಿರೂಪಿಸಿದೆ. ಗಣಿತವನ್ನು ಸಂತೋಷವಾಗಿ ಕಲಿಯುವಂತಾಗಲು, ಸೂಕ್ಷ್ಮಗಳನ್ನು ತಿಳಿದುಕೊಳ್ಳಲು ಈ ಪುಸ್ತಕ ಸಹಾಯಕವಾಗಿದೆ.
©2024 Book Brahma Private Limited.