ನೊ ಮೋರ್ ಇಂಗ್ಲಿಷ್

Author : ಶಿವಕುಮಾರ್ ಮಾವಲಿ

Pages 224

₹ 225.00




Year of Publication: 2021
Published by: ಸಾವಣ್ಣ ಪ್ರಕಾಶನ
Address: ಬೈರಸಂದ್ರ ಮೈನ್ ರೋಡ್ ಜಯನಗರ ಬೆಂಗಳೂರು-560011
Phone: 8660404034

Synopsys

‘ನೊ ಮೋರ್ ಇಂಗ್ಲಿಷ್’ ಕೃತಿಯು ಶಿವಕುಮಾರ ಮಾವಲಿ ಅವರ ಕೃತಿ. ಈ ಕುರಿತು ಲೇಖಕ ರಾಜೇಂದ್ರ ಚೆನ್ನಿ ಅವರು, `ಇಂಗ್ಲಿಷ್ ಕಲಿಯುವಾಗಿನ ಭಯ, ಹಿಂಜರಿಕೆ, ಕೀಳರಿಮೆಯಿಂದಾಗಿ ಆ ಭಾಷೆಯ ಬಗೆಗಿನ ಕುತೂಹಲ, ಅರಿತುಕೊಳ್ಳುವ ಖುಷಿ ಇವೆಲ್ಲಾ ಹೊರಟೇ ಹೋಗುತ್ತವೆ. ಈ ಪುಸ್ತಕದಲ್ಲಿ ಇಂಗ್ಲಿಷ್ ಭಾಷೆಯ ಬಗ್ಗೆ ನಮಗೆ ಗೊತ್ತಿರದೆ ಆದರೆ ಬಹುಕಾಲ ನೆನಪಿಡಬಹುದಾದ ಮಾಹಿತಿ ಇದೆ. ಇಂಗ್ಲಿಷ್ ಬಳಸುವಾಗ ಮಾಡುವ ತಪ್ಪುಗಳ ಬಗ್ಗೆ ಸಲಹೆಗಳಿವೆ. ಆದರೆ ಅದನ್ನು ಹೇಳುವ ರೀತಿಯಲ್ಲಿ ಲವಲವಿಕೆ, ನವಿರಾದ ಹಾಸ್ಯ, ಕಚಗುಳಿ ಇವೆಲ್ಲಾ ಇವೆ’ ಎಂದು ಪ್ರಶಂಸಿಸಿದ್ದಾರೆ. 

ಕೃತಿಯ ಕರ್ತೃ ಶಿವಕುಮಾರ ಮಾವಲಿ, ಇಂಗ್ಲಿಷ್ ಭಾಷೆಯಲ್ಲಿರುವ ವಿಶೇಷತೆಗಳು, ಕೆಲವು ಅತಾರ್ಕಿಕ ಗ್ರಾಮರ್ ಅಂಶಗಳು, ಪದಗಳು ಹುಟ್ಟಿದ ಪರಿ, ಇಂಡಿಯನ್ ಇಂಗ್ಲಿಷ್‌ನಲ್ಲಿ ನುಸುಳುವ ತಪ್ಪುಗಳು ಹೀಗೆ ಅನೇಕ ಸಂಗತಿಗಳ ಬಗ್ಗೆ ಅಧ್ಯಯನ ನಡೆಸುತ್ತಾ, ಜಗತ್ತಿನಲ್ಲಿರುವ ಆರು ಸಾವಿರಕ್ಕೂ ಹೆಚ್ಚಿನ ಭಾಷೆಗಳಲ್ಲಿ ಇದೊಂದು ಭಾಷೆ ಈ ಪರಿ ಮನ್ನಣೆ ಪಡೆದಿದೆ ಎಂದಾದರೆ ಅದಕ್ಕೇನು ಕಾರಣ ಎಂದು ಹುಡುಕುತ್ತಾ ಹೋದಾಗ ಅನೇಕ ಸಂಗತಿಗಳು ಎದುರಾದವು. ಇವನ್ನೆಲ್ಲಾ ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ’ ಎಂದು ಹೇಳಿದ್ದಾರೆ. ಇನ್ನು ಕೃತಿಯಲ್ಲಿ ಲವಲವಿಕೆ ಹಾಗೂ ಆಕರ್ಷಕ ಶೈಲಿಯನ್ನು ಬಳಸಿಕೊಂಡು ಇಂಗ್ಲೀಷ್‌ ಭಾಷೆಯ ಕೆಲವು ವಿಶಿಷ್ಟ ಸಂಗತಿಗಳ ಬಗೆಗೆ ವಿವರಗಳನ್ನು ನೀಡುತ್ತದೆ.ಪ್ರಸ್ತುತ ಕೃತಿಯು ಹಗುರವಾಗಿ, ಆಕರ್ಷಕವಾಗಿ, ಉಪಯುಕ್ತವಾದ ಮಾಹಿತಿಯನ್ನು ಇಂಗ್ಲೀಷ್‌ ಭಾಷೆಯ ಬಗ್ಗೆ ನೀಡುತ್ತದೆ. ಈ ಪುಸ್ತಕವು ಒಟ್ಟು 50 ಅಧ್ಯಾಯಗಳನ್ನು  ಪರಿವಿಡಿಯಲ್ಲಿ  ಹೊಂದಿದೆ.

About the Author

ಶಿವಕುಮಾರ್ ಮಾವಲಿ

ಶಿವಕುಮಾರ್ ಮಾವಲಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಾವಲಿಯವರು. ಶಿವಮೊಗ್ಗದ ಡಿ.ವಿ.ಎಸ್. ಹಾಗೂ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ.  ಸದ್ಯ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶಿವಕುಮಾರ್  ಪ್ರತಿಭಾವಂತ ಬರಹಗಾರ. ಕಥೆ, ಕವಿತೆ, ನಾಟಕ ಹೀಗೆ ಸಾಹಿತ್ಯದ ಹಲವು ವಿಭಾಗಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಶಿವಕುಮಾರ್ ಅವರ ಮೊದಲ ಕಥಾಸಂಕಲನ ‘ದೇವರು ಅರೆಸ್ಟ್ ಆದ’ ಅವರ ‘ಸುಪಾರಿ ಕೊಲೆ’ ನಾಟಕ ಸಿನಿಮವಾಗುತ್ತಿದೆ. ಅವರ ಇತ್ತೀಚಿನ ಪುಸ್ತಕ ಟೈಪಿಸ್ಟ್ ತಿರಸ್ಕರಿಸಿದ ಕಥೆ. ಈ ಕೃತಿಯನ್ನು ಬಹುರೂಪಿ ...

READ MORE

Related Books