ಲೇಖಕ ಬಿ.ಎಚ್. ನಿರಗುಡಿ ಅವರ ಕೃತಿ-ಆದರ್ಶ ಶಿಕ್ಷಕ ಹೇಗಿರಬೇಕು?. ಈ ಕೃತಿಯು 2012ರಲ್ಲಿ ಮೊದಲ ಮುದ್ರಣ ಕಂಡಿತ್ತು. ಮಕ್ಕಳ ಕಲಿಕೆಯು ಕೇವಲ ಶಿಕ್ಷಕರ ಬೊಧನೆಯನ್ನು ಮಾತ್ರ ಅವಲಂಬಿಸಿರುವುದಿಲ್ಲ. ಬದಲಾಗಿ, ಅದು ಶಿಕ್ಷಕನ ವ್ಯಕ್ತಿತ್ವವನ್ನೂ ಅವಲಂಬಿಸಿರುತ್ತದೆ. ಆದ್ದರಿಂದ, ಶಿಕ್ಷಕನು ಆದರ್ಶನಾಗಿರಬೇಕು. ಆತನ ವ್ಯಕ್ತಿತ್ವವು ಮಾದರಿಯಾಗಿರಬೇಕು. ಶಿಕ್ಷಕರಿಗೂ-ವಿದ್ಯಾರ್ಥಿಗಳಿಗೂ ಈ ಕೃತಿ ಉಪಯುಕ್ತ. ಶಿಕ್ಷಕರಲ್ಲಿರಬೇಕಾದ ಗುಣಗಳು, ಬೋಧನಾ ತಂತ್ರಗಳು, ಬೋಧನಾ ಕಲೆ ಹೀಗೆ ವಿಷಯ ವಸ್ತುಗಳನ್ನು ಒಳಗೊಂಡಿದೆ. ವಿಷಯವನ್ನು ತೀರಾ ಸಂಕೀರ್ಣಗೊಳಿಸದೆ ಸರಳವಾಗಿ ವಿವರಿಸಲಾಗಿದೆ.
©2024 Book Brahma Private Limited.