ಪ್ರಸ್ತುತ ಕೇಂದ್ರ ಸರಕಾರ 29 ಜುಲೈ, 2020ರಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆದು ಜಾರಿಗೆ ತಂದಿತು. ಸ್ವತಂತ್ರ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಜಾರಿಗೆ ಬಂದ ಮೂರನೇ ಶಿಕ್ಷಣ ನೀತಿ ಇದಾಗಿದೆ. ಸಾಮಾನ್ಯವಾಗಿ ಮಾನವನ ವಿಕಾಸದ ಹಂತದಲ್ಲಿ ಆಗುವ ಬದಲಾವಣೆಗಳು, ಹೊಸ ರೀತಿಯ ಜೀವನ ವಿಧಾನ, ವಿಜ್ಞಾನ – ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾಗುವ ಹೊಸ ಆವಿಷ್ಕಾರಗಳು, ಪರಿಣಾಮವಾಗಿ ಬದಲಾಗುವ ಉತ್ಪಾದನಾ ವಿಧಾನ, ಜೀವನ ವಿಧಾನ, ಇದೆಲ್ಲದರ ಪರಿಣಾಮವಾಗಿ ರೂಪುಗೊಳ್ಳುವ ಹೊಸ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ವ್ಯವಸ್ಥೆ - ಇವೆಲ್ಲವನ್ನು ಕಾಲಕಾಲಕ್ಕೆ ಪರಿಗಣಿಸಿ ಶಿಕ್ಷಣ ವ್ಯವಸ್ಥೆ ನವೀಕರಣಗೊಳ್ಳುತ್ತಲೇ ಇರುತ್ತದೆ. ಅದೇ ರೀತಿ ಪರಿವರ್ತನೆ ಆದ ಒಂದು ನೀತಿ ಈ ರಾಷ್ಟ್ರೀಯ ಶಿಕ್ಷಣ ನೀತಿ.
ಇನ್ನು ಈ ಪುಸ್ತಕದಲ್ಲಿ ಮುಖ್ಯವಾಗಿ ಹೊಸ ಶಿಕ್ಷಣ ನೀತಿಯ ಮಿತಿ ಮತ್ತು ಗತಿಯ ಬಗ್ಗೆ ಚರ್ಚಿಸಲಾಗಿದೆ. ಅವುಗಳ ಸಾಧದ -ಬಾಧಕಗಳೇನು?ಹಾಗೂ ನೀತಿ ನಿರೂಪಿಸುವ ಕಾಲಘಟ್ಟದಲ್ಲಿ ಅಲ್ಲಿನ ವ್ಯವಸ್ಥೆಯನ್ನು ಹಾಗೂ ಭಾದಿಸುವ ಸಾಮಾಜಿಕ, ಆರ್ಥಿಕ,ಸಾಂಸ್ಕೃತಿಕ ಸಮಸ್ಯೆಗಳನ್ನು ಮುಖ್ಯವಾಗಿ ಇಲ್ಲಿ ಬರೆಯಲಾಗಿದೆ.ಈ ಪುಸ್ತಕದಲ್ಲಿ ಬರಗೂರು ರಾಮಚಂದ್ರಪ್ಪ, ಜಿ.ರಾಮಕೃಷ್ಣ, ಪುರುಷೋತ್ತಮ ಬಿಳಿಮನೆ ,ನಿರಂಜನಾರಾಧ್ಯ ವಿ.ಪಿ,ಶ್ರೀನಿವಾಸ ಕಕ್ಕಿಲ್ಲಾಯ, ಮಹಾಬಲೇಶ್ವರ ರಾವ್ ಅವರ ಲೇಖನಗಳು ಒಳಗೊಂಡಿವೆ. ಇನ್ನು ಪರಿವಿಡಿಯಲ್ಲಿ ಪ್ರವೇಶಿಕ,ನೂತನ ಶಿಕ್ಷಣ ನೀತಿ 2020 ,ರಾಷ್ಟ್ರೀಯ ಶಿಕ್ಷಣ ನೀತಿ- 2020 :ಒಂದು ನೋಟ, ಹೊಸ ಶಿಕ್ಷಣ ನೀತಿಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ,ನೂತನ ವೈದ್ಯಕೀಯ ಶಿಕ್ಷಣ ನೀತಿ,ಶಿಕ್ಷಕರ ಶಿಕ್ಷಣ:ಪ್ರೀತಿಯ ನಾಟಕ,ಕಾದ ಕಬ್ಬಿಣದ ಬರೆ ವಿಷಯದ ಲೇಖನಗಳು ಇವೆ.
©2025 Book Brahma Private Limited.