ಸಿರಿಗನ್ನಡ ಬರಹದ ಅಕ್ಷರಲೋಕ-ಲೇಖಕ ಬಾಗೂರು ಮಾರ್ಕಾಂಡೇಯ ಅವರು ಚಿತ್ರಕಲೆಯಲ್ಲಿ ಅಕ್ಷರ ಲೇಖನ ಬರೆಯಲು ಉಪಯುಕ್ತವಾಗುವ ಹಾಗೆ ಬರೆದ ಲೇಖನಗಳ ಸಂಕಲನ. ಚಿತ್ರಕಲಾ ಶಿಕ್ಷಣ ಕಲಿಯುವ, ಆಸಕ್ತರಿಗೆ, ಅಭಿಮಾನಿಗಳಿಗೆ ಅಕ್ಷರಲೇಖನ ಹೇಗೆ ಬರೆಯುವುದು ಮತ್ತು ಯಾವ ಯಾವ ರೀತಿಯ ಅಕ್ಷರ ಲೇಖನಗಳು ಹಾಗೂ ಅವುಗಳ ಹೊಸ ಹೊಸ ವಿನ್ಯಾಸಗಳನ್ನು ಬರೆಯಬಹುದು ಎಂಬ ಬಗ್ಗೆ ಉದಾಹರಣೆಯ ಸಮೇತವಾಗಿ ಇಲ್ಲಿ ವಿವರಿಸಲಾಗಿದೆ.
ಕನ್ನಡ, ಇಂಗ್ಲಿಷ್ ಹಿಂದಿ ಹೀಗೆ ಯಾವುದೇ ಭಾಷೆಯನ್ನು ಅದರಲ್ಲಿ ಪದಗಳು ವಾಕ್ಯಗಳನ್ನು ಹೇಗೆ ರಚಿಸಿದರೆ ಸುಂದರವಾಗಿ ಕಾಣುತ್ತದೆ ಎಂಬುದನ್ನು ಹಂತಹಂತವಾಗಿ ವಿವರಿಸಿ ಹೇಳಲಾಗಿದೆ. ಅಲ್ಲದೆ, ಆರಂಭಿಕವಾಗಿ ಕಲಿಯುವ ವಿದ್ಯಾರ್ಥಿಗಳಿಗೂ ಸಿದ್ಧಪಡಿಸಿದ ಪುಸ್ತಕವಿದು.
©2025 Book Brahma Private Limited.