ಬ್ರಿಟಿಷರ ಆಡಳಿತ ಕಾಲದಲ್ಲಿ ಭಾರತೀಯ ಪ್ರತಿಭಾವಂತರಿಗೆ ಇಂಗ್ಲಿಷ್ ಶಿಕ್ಷಣ ಪದ್ಧತಿ ಅಳವಡಿಸಬೇಕೆ ಅಥವಾ ಪ್ರಾಚೀನ ವೇದಪಾಠಗಳು ಮಾತ್ರ ಸಾಕೇ ಎಂಬ ವಿವಾದವೊಂದು ಮುಗಿಲು ಮುಟ್ಟಿತ್ತು. 1835ರ ಸಂದರ್ಭದಲ್ಲಿ ವೈದಿಕ ಸಂಪ್ರದಾಯದ ವಿರೋಧವನ್ನು ಲೆಕ್ಕಿಸದೆ ಹೊಸ ಶಿಕ್ಷಣ ಪದ್ಧತಿ ಬಗ್ಗೆ ಸುಧಾರಣೆಗಳನ್ನೊಳಗೊಂಡ ‘ಮೆಕಾಲೆ ಪರಿಪತ್ರ’ವನ್ನು ಅಂದಿನ ಗವರ್ನರ್ ಜನರಲ್‌ಗೆ ನೀಡಿ, ಭಾರತದಲ್ಲಿ ಇಂಗ್ಲಿಷ್ ಶಿಕ್ಷಣಕ್ಕೆ ನಾಂದಿ ಹಾಡಿದ ಪ್ರಮುಖ ವ್ಯಕ್ತಿ ಥಾಮಸ್ ಬ್ಯಾಬಿಂಗ್ಟನ್ ಮೆಕಾಲೆ.
ಅಂದು ಜಾರಿಯಾದ ಇಂಗ್ಲಿಷ್ ಶಿಕ್ಷಣ ಪದ್ಧತಿಯಿಂದ ಇಂದಿನವರೆಗೂ ನಡೆದು ಬಂದ ಶೈಕ್ಷಣಿಕ ವಿಚಾರಗಳನ್ನು ಲೇಖಕ ಮಹಾಬಲೇಶ್ವರ ರಾವ್ ಪ್ರಸ್ತಾಪಿಸಿದ್ದಾರೆ. ಅದರಿಂದಾದ ಒಳಿತು-ಕೆಡುಕುಗಳೇನು, ಸುಮಾರು 175 ವರ್ಷಗಳ ಹಿಂದೆ ನೆಟ್ಟು ಬೆಳೆಸಿದ ಈ ಪದ್ಧತಿ ಮುಂದೆ ಹಿಡಿದ ದಾರಿಯ ಪರಿಣಾಮಗಳೇನಾಗಿವೆ ಎಂಬುದರ ಮಾಹಿತಿ ಸವಿವರವಾಗಿ ಈ ಪುಸ್ತಕದಲ್ಲಿ ಸಿಗುತ್ತದೆ.
©2025 Book Brahma Private Limited.