ಶಾಂತಾ ರಾ. ನಾಡಗೀರ ರಚಿಸಿದ ಕೃತಿ-ಮುದ್ದು ಮಗುವಿಗೊಂದು ಅರ್ಥಪೂರ್ಣ ಹೆಸರು. ಹೆಸರಿನಲ್ಲೇನಿದೆ ಎಂದು ಕೆಲವರು ವ್ಯಂಗ್ಯವಾಡುತ್ತಾರೆ. ಆದರೆ, ಮಗುವಿಗೊಂಡು ಉತ್ತಮ ಹೆಸರು ಇಟ್ಟರೆ ಅದು ಇಡೀ ಮನೆಯ ಸಂತಸದ ಮೂಲವೂ ಆಗಿರುತ್ತದೆ. ಅದಕ್ಕಾಗಿ ಮಗುವಿಗೆ ಹೆಸರಿಡಲು ನೆರೆಹೊರೆಯವರನ್ನೂ ಕೇಳಲಾಗುತ್ತದೆ. ಎಲ್ಲರಲ್ಲೂ ಕೇಳಿದ ನಂತರ ತಮಗೆ ಇಷ್ಟವಾದ ಒಂದು ಹೆಸರು ಆಯ್ದು ಮಗುವಿಗೆ ಇಡುತ್ತಾರೆ. ಒಟ್ಟಾರೆ ಈ ಪ್ರಕ್ರಿಯೆಯಲ್ಲಿ ಮನೆಯ ಸಂಭ್ರಮ ಇರುತ್ತದೆ. ಈ ಹಿನ್ನೆಲೆಯಲ್ಲಿ ಈ ಪುಸ್ತಕವು ಉತ್ತಮ ಕೃತಿ.
©2025 Book Brahma Private Limited.