ಅಶೋಕಕುಮಾರ ರಂಜೇರೆ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಸಹ ಪ್ರಾಧ್ಯಾಪಕ ಆಗಿದ್ದಾರೆ. ಕನ್ನಡ ಭಾಷ ಅಧ್ಯಯನ, ಕನ್ನಡ ಸಾಹಿತ್ಯ ಅಧ್ಯಯನ, ರಂಗಭೂಮಿ, ಭಾಷಾ ಭೋಧನೆ ಮತ್ತು ಭಾಷಾ ಕಲಿಕೆ ಇವರ ಪ್ರಮುಖ ಅಧ್ಯಯನ ಕ್ಷೇತ್ರಗಳು.
ಸಾಹಿತ್ಯ ಮತ್ತು ಇತಿಹಾಸ ಸಂಬಂಧ, ಭಾಷೆ ಮತ್ತು ಶಿಕ್ಷಣ, ವಿವಿಧ ವೃತ್ತಿ ಪದಕೋಶ, ಮೂಕನಾಟಕ ಇತ್ಯಾದಿ ಪ್ರಕಟಿತ ಕೃತಿಗಳು. ಶಾಸ್ತ್ರೀಯ ಭಾಷ ರಾಜಕಾರಣ, ಸ್ತ್ರೀ ಭಾಷ ಯೋಜನೆ, ಒಂದನೇ ತರಗತಿಯಿಂದಲೇ ಇಂಗ್ಲೀಷ್ ಕಲಿಕೆ, ಶಾಲಾ ಶಿಕ್ಷಣದಲ್ಲಿ ವ್ಯಾಕರಣ ಮೊದಲಾದ ಸಂಶೋಧನ ಲೇಖನ ಪ್ರಕಟಿಸಿದ್ದಾರೆ.