ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರು ಮಕ್ಕಳಿಗಾಗಿ ರಚಿಸಿದ ಕೃತಿ-ಭಾರತದ ಹಬ್ಬ ಹರಿದಿನಗಳು ಹಾಗೂ ದಿನಾಚರಣೆಗಳು. ಭಾರತವು ಅಸಂಖ್ಯ ಹಬ್ಬಗಳ ದೇಶ. ಗಣ್ಯ ಮಹನೀಯರನ್ನು ಸ್ಮರಿಸುವ ದೇಶ. ಮಕ್ಕಳ ಮನಸ್ಸು ಇಂತಹ ಉದಾತ್ತ ಸಂಸ್ಕೃತಿಯಲ್ಲಿ ರೂಪುಗೊಳ್ಳಲಿ ಎಂಬ ಸದುದ್ದೇಶದೊಂದಿಗೆ ಮಹನೀಯರ ಜಯಂತಿ-ಪುಣ್ಯತಿಥಿಗಳಂತಹ ದಿನಾಚರಣೆಗಳು ಹಾಗೂ ಸಾಂಪ್ರದಾಯಿಕ-ಪರಂಪರಾಗತ ಆಚರಣೆಗಳನ್ನು ಗೌರವಿಸುವ ಸಂಕೇತವಾಗಿ ಹಬ್ಬಗಳನ್ನು ಆಚರಿಸುವುದು ಭಾರತೀಯ ಪದ್ಧತಿಯಲ್ಲಿ ನಡೆದುಕೊಂಡು ಬಂದಿದೆ. ಆ ಮೂಲಕ ಸಾರ್ವಜನಿಕ ಹಾಗೂ ವ್ಯಕ್ತಿಗತ ಜೀವನವು ನೆಮ್ಮದಿಯಿಂದ ಕೂಡಿರಲಿ ಎಂಬ ಆಶಯ ಈ ಆಚರಣೆಯ ಹಿಂದಿದೆ. ಈ ಹಿನ್ನೆಲೆಯಲ್ಲಿ ಲೇಖಕರು, ಯುಗಾದಿ, ಗಣೇಶ ಚತುರ್ಥಿ, ನವರಾತ್ರಿ, ಸಂಕ್ರಮಣ ಮಾತ್ರವಲ್ಲ; ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮಗಾಂಧಿ, ಬಸವಣ್ಣ, ವಿಶ್ವೇಶ್ವರಯ್ಯ ಹೀಗೆ ದೇಶಭಕ್ತರ, ವಿದ್ವಾಂಸರ, ಚಿಂತಕರ ಜಯಂತಿ-ಪುಣ್ಯತಿಥಿಗಳನ್ನು ಆಚರಿಸುವ ಅಗತ್ಯ ಹಾಗೂ ಮಹತ್ವವನ್ನು ಮಕ್ಕಳಿಗೆ ತಿಳಿಸುವ ಕೃತಿ ಇದು.
©2025 Book Brahma Private Limited.