ಶಿಕ್ಷಕರಾಗಿ, ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ ವಿ.ಎ.ಬೆನಕನಾಳ ತಮ್ಮ ಅನುಭಗಳನ್ನು ಇಲ್ಲಿ ದಾಖಲಿಸಿದ್ದಾರೆ. ಒಟ್ಟು 42 ಅಧ್ಯಾಯಗಳಲ್ಲಿ ಪದವಿ ವಿದ್ಯಾಭ್ಯಾಸ, ಶಿಕ್ಷಕ ವೃತ್ತಿಗೆ ಹೆಜ್ಜೆ ಇಟ್ಟ ಕ್ಷಣಗಳು, ತಾವು ಶಿಕ್ಷಕರಾಗಿದ್ದ ಹೈಸ್ಕೂಲ್ ಪರಿಸರ, ಅಲ್ಲಿನ ಸಿಬ್ಬಂದಿ, ಅನುಭವಿಸಿದ ಸಮಸ್ಯೆಗಳು, ಕಾಲೇಜು ಪ್ರಾಧ್ಯಾಪಕರಾಗಿ ಸೇರ್ಪಡೆ, ಅಲ್ಲಿನ ಸಹೋದ್ಯೋಗಿಗಳ ಅವಾಂತರಗಳನ್ನು ಬಿಚ್ಚಿಟ್ಟಿದ್ದಾರೆ ಲೇಖಕರು. ಕೃತಿಯನ್ನು ಆತ್ಮಕಥೆಯಂತೆ ಬರೆದರೂ, ಶಿಕ್ಷಕರು ಹೇಗಿರಬೇಕು? ಅವರ ಕರ್ತವ್ಯಗಳೇನು? ಎನ್ನುವ ಸಲಹೆಗಳನ್ನೂ ಪ್ರತ್ಯೇಕ ಅಧ್ಯಾಯದಲ್ಲಿ ಲೇಖಕರು ನೀಡಿದ್ದಾರೆ.
©2025 Book Brahma Private Limited.