‘ಪಠ್ಯ ಮರು ಪರಿಷ್ಕರಣೆ ಹಿನ್ನೆಲೆ- ಮುನ್ನೆಲೆ’ ಕೃತಿಯು ಆರ್. ರಾಮಕೃಷ್ಣ ಹಾಗೂ ನಿರಂಜನಾರಾಧ್ಯ ವಿ.ಪಿ ಅವರ ಸಂಪಾದಿತ ಲೇಖನ ಸಂಕಲನವಾಗಿದೆ. ಕೃತಿಯಲ್ಲಿರುವ ಕೆಲವೊಂದು ವಿಚಾರಗಳು ಹೀಗಿವೆ; ಪ್ರಾಚೀನ ಭಾರತದ ನೊಂದ ಜನರ ಪಾಲಿನ ಪ್ರೇಮ ಸಿಂಚನ ಗೌತಮ ಬುದ್ಧ, ಹನ್ನೆರಡನೇ ಶತಮಾನದಲ್ಲಿ ಸ್ಥಾವರಗೊಂಡ ದೇಗುಲಗಳನ್ನೇ ನಿರಾಕರಿಸಿ, ಅಸ್ಪ್ರಶ್ಯರು-ಮಹಿಳೆಯರು ಸೇರಿದಂತೆ ಸರ್ವ ಶೋಷಿತ ಜನರ ಕೈಗೆ ‘ಇಷ್ಟಲಿಂಗ’ವನ್ನೇ ಕೊಟ್ಟ ಕ್ರಾಂತಿಯೋಗಿ ಬಸವಣ್ಣ, ಶ್ರೇಷ್ಟ ವಚನಕಾರ್ತಿ ಅಕ್ಕಮಹಾದೇವಿ, ಕುಲಕುಲವೆಂದು ಹೊಡೆದಾಡದಿರಿ ಎಂದ ಕನಕದಾಸರು, ಪುರಂದರದಾಸರು, ಕಬೀರ, ಶಿಶುನಾಳ ಶರೀಫರು ಸೇರಿದಂತೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಸಾರಿದ ಭಕ್ತಿ ಪಂಥದ ಮಹಾ ಚೇತನಗಳು, ಹತ್ತೊಂಬತ್ತನೇ ಶತಮಾನದಲ್ಲಿ ಮೊತ್ತ ಮೊದಲಿಗೆ ಹೆಣ್ಣು ಮಕ್ಕಳಿಗೆ ಮತ್ತು ದಲಿತ-ಶೂದ್ರ ಮಕ್ಕಳಿಗೆ ಶಾಲೆಯ ಬಾಗಿಲನ್ನು ತೆರೆದ ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಫುಲೆ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್, ರಾಷ್ಟ್ರಕವಿ ಕುವೆಂಪು, ಮಹಾನ್ ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳು, ಅಮರ ಸ್ವಾತಂತ್ಯ್ರ ಹೋರಾಟಗಾರ ಕ್ರಾಂತಿಕಾರಿ ಹುತಾತ್ಮ ಯೋಧ ಭಗತ್ ಸಿಂಗ್, ಬೆಂಗಳೂರು ನಿರ್ಮಾಪಕ ಕೆಂಪೇಗೌಡರು, ಸುರಪುರದ ನಾಯಕರು, ಮಹಾಕವಿ ವಾಲ್ಮೀಕಿ ಸೇರಿದಂತೆ ಭಾರತ ಕಂಡ ಎಲ್ಲ ಮಹಾನ್ ದಾರ್ಶನಿಕರು, ಸಮಾಜ ಸುಧಾರಕರು, ಕ್ರಾಂತಿಕಾರಿ ಹೋರಾಟಗಾರರ ಬದುಕು ಹೋರಾಟ ಮತ್ತು ಅವರುಗಳು ನಂಬಿದ ಉನ್ನತ ಮೌಲ್ಯಗಳನ್ನು ಈ ಕೃತಿಯು ತಿಳಿಸುತ್ತದೆ.
©2024 Book Brahma Private Limited.