ಕನ್ನಡ ವಿಶ್ವವಿದ್ಯಾಲಯ ತನ್ನ ಸೃಜನಶೀಲ ಸಂಶೋಧನೆಯ ಹಾದಿಗಳನ್ನು ಶೋಧಿಸುವ ನಿಟ್ಟಿನಲ್ಲಿ, ಶೋಧನೆಯ ಹಿನ್ನೆಲೆಯಾಗಿ ಕನ್ನಡ ಸಾಹಿತ್ಯ ಪರಂಪರೆ, ಜನಪದ ಮೌಖಿಕ ಪರಂಪರೆ, ಜ್ಞಾನಶಿಸ್ತುಗಳನ್ನು ರೂಪಿಸಿಕೊಳ್ಳುವ ಅಗತ್ಯವನ್ನು ಶಿಕ್ಷಣವಲಯಕ್ಕೆ ಪರಿಚಯಿಸಿದೆ. ಶೈಕ್ಷಣಿಕ ಚಿಂತನೆಯ ಸಂಕಟಗಳನ್ನು, ಬಿಕ್ಕಟ್ಟುಗಳನ್ನು ಎದುರಿಸುತ್ತಲೇ ಕನ್ನಡ ವಿಶ್ವವಿದ್ಯಾಲಯ, ಶಿಕ್ಷಣ ವಿಭಾಗ ಮುಂದುವರೆಯುತ್ತಿದೆ. ಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದನ್ನು ’ಶಿಕ್ಷಣ ಮತ್ತು ಜೀವನ ಶೈಲಿ’ ಕಿರುಹೊತ್ತಿಗೆಯಲ್ಲಿ ಆಧುನಿಕ ಚಿಂತನೆಗಳನ್ನು ಲೇಖಕರಾದ ಚಿದಾನಂದ ಸಾಲಿಯವರು ಈ ಕಿರುಹೊತ್ತಿಗೆಯಲ್ಲಿ ಮುಖಾಮುಖಿಗೊಳಿಸುವ ಪ್ರಯತ್ನವನ್ನು ಮಾಡಿದ್ದಾರೆ.
©2024 Book Brahma Private Limited.