ಲೇಖಕ ಎಸ್.ವಿ. ಶ್ರೀನಿವಾಸಮೂರ್ತಿ ಅವರ ವಿಜ್ಞಾನಕ್ಕೆ ಸಂಬಂಧಪಟ್ಟ ಲೇಖನಗಳ ಸಂಕಲನ ಕೃತಿ ʻವಿಶ್ವಯಾನಕ್ಕೆ ಗಣಿತವಾಹನʼ. ಗಣಿತ ಮತ್ತು ಭೌತಶಾಸ್ತ್ರಗಳು ವಿಶಾಲವಾದ ವಿಶ್ವವನ್ನು ಒಂದು ಹಂತದವರೆಗೆ ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಭೌತಶಾಸ್ತ್ರದ ಎಷ್ಟೋ ಸಂಶೋಧನೆಗಳು ಮೊದಲು ಗಣಿತದ ಮೂಲಕ ಊಹಿಸಲ್ಪಟ್ಟು ಬಳಿಕ ವೀಕ್ಷಣೆಗಳ ಮೂಲಕ ಸಾಬೀತಾಗಿವೆ. ಹಾಗಾಗಿ ಇವರಡೂ ಒಂದಕ್ಕೊಂದು ಸಾಮ್ಯವಿರುವ ಪರಿಕಲ್ಪನೆಗಳಾಗಿವೆ. ಪ್ರಸ್ತುತ ಕೃತಿಯು ಗಣಿತದ ಮೂಲಭೂತ ಪರಿಕಲ್ಪನೆಗಳಾದ ಸೊನ್ನೆ, ಅನಂತ, ಸಂಭವನೀಯತೆ, ಸರಾಸರಿ ಇತ್ಯಾದಿಗಳ ಮಹತ್ವ, ಪ್ರಕೃತಿಯಲ್ಲಿ ಗಣಿತ ಹಾಸುಹೊಕ್ಕಾಗಿರುವ ರೀತಿ ಇತ್ಯಾದಿಗಳ ಬಗೆಗೆ ಬೆಳಕು ಚೆಲ್ಲುತ್ತದೆ. ಜೊತೆಗೆ ಖಗೋಳ ಜಗತ್ತಿನ ವಿಸ್ಮಯಗಳ ಬಗೆಗೂ ಮಾಹಿತಿ ನೀಡುತ್ತಾರೆ. ಶ್ರೀನಿವಾಸಮೂರ್ತಿಯವರು ಈ ವರೆಗೆ ಬರೆದ, ಪತ್ರಿಕೆಗಳಲ್ಲಿ ಪ್ರಕಟವಾದ ತಮ್ಮ ಎಲ್ಲಾ ಲೇಖನಗಳನ್ನು ಇಲ್ಲಿ ಒಟ್ಟುಗೂಡಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ.
©2025 Book Brahma Private Limited.