ಮಗುವಿನ ಮನೋವಿಕಾಸದಲ್ಲಿ ರೇಖೆ, ಚಿತ್ರಕಲೆ ವಹಿಸುವ ಮಹತ್ವದ ಪಾತ್ರವನ್ನು ತೀರಾ ನವಿರಾಗಿ, ಮಕ್ಕಳ ಮನಸ್ಸಿಗೆ ಮುದ ನೀಡುವ ರೀತಿಯಲ್ಲಿ ಶಿಕ್ಷಣ ನೀಡುವ ಕೃತಿ-ಮಗು ಮತ್ತು ಚಲಿಸುವ ರೇಖೆ. ಕವಿ ಬಾಗೂರು ಮಾರ್ಕಾಂಡೇಯ ಅವರು ಬರೆದಿದ್ದು, ಮಗುವಿನ ಚಿತ್ರಕಲಾ ಶಿಕ್ಷಣಕ್ಕೆ ಬೆಳಕು ಚೆಲ್ಲುವಂತಹ ಕೃತಿ.
ಈ ಪುಸ್ತಕಕ್ಕೆ ಪುಸ್ತಕ ಸೊಗಸು ಬಹುಮಾನ ಬಂದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗೌರವಧನವೂ ಪ್ರಾಪ್ತವಾಗಿದೆ. ‘ತಾರೇ ಜಮೀನ್ ಫರ್’ ಈ ಸಿನಿಮಾ ಬರುವ ಮುನ್ನವೇ, ಅಲ್ಲಿಯ ಯೋಚನಾ ಲಹರಿಯು ಈ ಪುಸ್ತಕದಲ್ಲಿ ಚಲ್ಲುವರಿದಿದ್ದು ಈ ಪುಸ್ತಕದ ಹೆಗ್ಗಳಿಕೆ. ಮಕ್ಕಳ ಚಿತ್ರಗಳನ್ನು ಹೇಗೆ ಗ್ರಹಿಸಿ, ಅರ್ಥೈಸಬೇಕು ಎಂಬುದರ ವಿವರಣೆಯೂ ಇಲ್ಲಿದ್ದು, ಮಕ್ಕಳ ಮನೋವಿಕಾಸದ ತತ್ವಗಳ ಹಿನ್ನೆಲೆಯಲ್ಲೇ ಕೃತಿ ರೂಪುಗೊಂಡಂತೆ ಕವಿಯು ತನ್ನ ಸೂಕ್ಷ್ಮತೆಯನ್ನು ಇಲ್ಲಿ ಬಳಸಿದ್ದು ಸ್ಪಷ್ಟವಾಗುತ್ತದೆ.
©2025 Book Brahma Private Limited.