ಗಣಿತ ಕಲಿಕೆಗೆ ಎಷ್ಟೊಂದು ಆಟಗಳು

Author : ಗಣಪತಿ ಹೆಗಡೆ ಮೂಡ್ಕಣಿ

Pages 80

₹ 95.00




Year of Publication: 2022
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಬೆಂಗಳೂರು- 560001
Phone: 0802216900

Synopsys

ಗಣಿತ ಕಲಿಕೆಗೆ ಎಷ್ಟೊಂದು ಆಟಗಳು ಎಂಬ ಕೃತಿಯು ಗಣಪತಿ ಹೆಗಡೆ ಮೂಡ್ಕಣಿಯವರ ಕೃತಿಯಾಗಿದೆ. ಪ್ರತಿಯೊಬ್ಬನಿಗೂ ವಿದ್ಯಾರ್ಥಿ ಜೀವನವು ಅನುಭವಗಳನ್ನು ಕಟ್ಟಿಕೊಡುವ ಸಂದರ್ಭವಾಗಿದೆ. ಕಲಿಕೆಯನ್ನು ಮಧುರವಾಗಿಸುವತ್ತ ಹಲವಾರು ವಿಧಾನಗಳನ್ನು ಸರಕಾರವೂ, ವಿದ್ಯಾ ಇಲಾಖೆಯೂ ಅನೇಕ ಬಗೆಯ ಕಾರ್ಯಕ್ರಮಗಳ ಮೂಲಕ ಜಾರಿಗೊಳಿಸುತ್ತಿವೆ. ಈ ನಿಟ್ಟಿನಲ್ಲಿ 'ಗಣಿತ ಕಲಿಕೆಗೆ ಎಷ್ಟೊಂದು ಆಟಗಳು ನನ್ನ ಪ್ರಯತ್ನವಾಗಿ ನಿಮ್ಮ ಮುಂದಿದೆ. ಗಣಿತ ಕಲಿಸುವಾಗ ಶಿಕ್ಷಕರು ಎದುರಿಸುವ ಸಮಸ್ಯೆಯೆಂದರೆ, ಪರಿಕಲ್ಪನೆಯೊಂದನ್ನು ರೂಢಿಗತಗೊಳಿಸುವುದು ಹೇಗೆ ಎಂಬುದು, ಪರಿಕಲ್ಪನೆಯೊಂದನ್ನು ರೂಢಿಸುವುದು ಗಣಿತ ಕಲಿಕೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಅಭ್ಯಾಸದಿಂದ ಮಾತ್ರ ಇದು ಸಾಧ್ಯ. ವಿದ್ಯಾರ್ಥಿಗಳಿಗೆ ಈ ಅಭ್ಯಾಸದ ಹಾದಿ ಇಷ್ಟವಾದಾಗ ಇದರ ಫಲ ನೂರ್ಮಡಿಯಾಗುತ್ತದೆ. ಗಣಿತ ಅಭ್ಯಾಸಕ್ಕಾಗಿ ಆಟಪಾಠದ ಹಾದಿ ಈ ಪುಸ್ತಕದ ಉದ್ದೇಶವಾಗಿದೆ ಎಂದು ಲೇಖಕರು ಹೇಳಿದ್ದಾರೆ.

About the Author

ಗಣಪತಿ ಹೆಗಡೆ ಮೂಡ್ಕಣಿ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರಾದ ಗಣಪತಿ ಹೆಗಡೆ ಮೂಡ್ಕಣಿ ವಿಜ್ಞಾನ ಪದವೀಧರರು. ಗಣಿತ ಹಾಗೂ ವಿಜ್ಞಾನ ಕಲಿಕೆಯಲ್ಲಿ ಹೊಸ ಹೊಸ ಪ್ರಯೋಗ ನಿರತರಾದ ಇವರು ಆಟದೊಂದಿಗೆ ಗಣಿತವನ್ನು ಯಶಸ್ವಿಯಾಗಿ ಮಕ್ಕಳಿಗೆ ಕಲಿಸುತ್ತಿದ್ದಾರೆ. "ಜಗದೊಡೆಯ" ಎಂಬ ಮಕ್ಕಳ ನಾಟಕವನ್ನೂ ಪ್ರಕಟಿಸಿದ್ದಾರೆ. ಹಲವು ಪತ್ರಿಕೆಗಳು ಇವರ ಆಟದ ಕಲಿಕೆಯನ್ನು ಮೆಚ್ಚಿ ಪ್ರಶಂಸಿಸಿವೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ "TAFIT" ರಾಜ್ಯ ಪ್ರಶಸ್ತಿ ನೀಡಿದೆ. ಲೇಖಕರು ತಾರಗೋಡ ಎಂಬಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ...

READ MORE

Related Books