ವಾಣಿಜ್ಯ ಶಾಸ್ತ್ರ

Author : ಉದಯ ಕುಮಾರ ಇರ್ವತ್ತೂರು

Pages 78




Year of Publication: 2007
Published by: ಪ್ರಸಾರಾಂಗ, ಕನ್ನಡ ವಿಶ್ವ ವಿದ್ಯಾನಿಲಯ ಹಂಪಿ
Address: ಕನ್ನಡ ವಿಶ್ವ ವಿದ್ಯಾನಿಲಯ, ಹಂಪಿ- 583239

Synopsys

ಲೇಖಕ ಡಾ. ಉದಯ ಕುಮಾರ ಇರ್ವತ್ತೂರು ಅವರ ಶೈಕ್ಷಣಿಕ ಕೃತಿ ʻವಾಣಿಜ್ಯ ಶಾಸ್ತ್ರʼ. ವಾಣಿಜ್ಯ ಶಾಸ್ತ್ರದ ಕುರಿತು ಸರಳವಾದ ರೀತಿಯಲ್ಲಿ ಪ್ರಾಥಮಿಕ ತಿಳುವಳಿಕೆ ನೀಡುವ ಮಾಹಿತಿಯ ಕೊರತೆಯನ್ನು ನೀಗಿಸುವ ದಿಸೆಯಿಂದ ಲೇಖಕ ಡಾ. ಉದಯ ಕುಮಾರ ಇರ್ವತ್ತೂರು ಅವರು ʻವಾಣಿಜ್ಯ ಶಾಸ್ತ್ರʼ ಕೃತಿಯನ್ನು ರಚಿಸಿದ್ದಾರೆ. ಪುಸ್ತಕದಲ್ಲಿ ಬಿ.ಎ. ವಿವೇಕ ರೈ ಅವರು, “ವಾಣಿಜ್ಯಶಾಸ್ತ್ರ ಎನ್ನುವ ಗ್ರಂಥ ವಿಷಯಕ್ಕೆ ಸಂಬಂಧಿಸಿದ ಸಮಗ್ರ ವಿವರಗಳನ್ನು ಕನ್ನಡದಲ್ಲಿ ಅಚ್ಚುಕಟ್ಟಾಗಿ ಕೊಟ್ಟಿರುವ ಕೃತಿ. ವಾಣಿಜ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಹೆಚ್ಚು ಸಮರ್ಪಕವಾದ ಇಂತಹ ಗ್ರಂಥ ಪ್ರಕಟವಾಗುವುದು ತೀರ ಅಗತ್ಯ. ಡಾ. ಉದಯಕುಮಾರ ಇರ್ವತ್ತೂರು ಈಗಾಗಲೆ ವಾಣಿಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರಗಳಿಗೆ ಸಂಬಂಧಿಸಿದಂತೆ ಲೇಖನಗಳನ್ನು ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ವಾಣಿಜ್ಯಶಾಸ್ತ್ರವು ಶಾಲಾ ಕಾಲೇಜುಗಳಲ್ಲಿ ಅಧ್ಯಯನ ವಿಷಯವಾಗಿರುವುದರಿಂದ ಇಂತಹ ಕೃತಿಗಳು ಕನ್ನಡ ಮಾಧ್ಯಮದ ಉತ್ತಮ ಪಠ್ಯಪುಸ್ತಕಗಳಾಗಿ ಕಾರ್ಯನಿರ್ವಹಿಸಲು ಶಕ್ತವಾಗಿವೆ. ವ್ಯಾಪಕವಾಗಿ ವಿಸ್ತರಣೆಗೊಂಡಂತೆ ವಾಣಿಜ್ಯಶಾಸ್ತ್ರವನ್ನು ಕುರಿತು ಖಚಿತವಾಗಿ ಸಮರ್ಪಕವಾಗಿ ಎಲ್ಲಾ ಮಾಹಿತಿಗಳನ್ನು ಒಂದೆಡೆ ಸೇರಿಸಿ ಡಾ. ಉದಯಕುಮಾರ ಇರ್ವತ್ತೂರು ಅವರು ಕೃತಿಯನ್ನು ರಚಿಸಿದ್ದಾರೆ. ವಾಣಿಜ್ಯ ಜಗತ್ತು ವಿಶೇಷವಾಗಿ ವಿಸ್ತರಣೆಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಮತ್ತು ಕರ್ನಾಟಕವು ಜಾಗತೀಕರಣಕ್ಕೆ ಒಳಗಾಗುತ್ತಿರುವ ಈ ಸನ್ನಿವೇಶದಲ್ಲಿ ಕನ್ನಡದಲ್ಲಿ ವಾಣಿಜ್ಯಶಾಸ್ತ್ರದ ಕುರಿತು ಇಂತಹ ಗ್ರಂಥಗಳು ಪ್ರಕಟವಾಗುವುದು ಮುಖ್ಯವಾಗುತ್ತದೆ” ಎಂದು ಹೇಳಿದ್ದಾರೆ.

About the Author

ಉದಯ ಕುಮಾರ ಇರ್ವತ್ತೂರು
(01 June 1960)

ಡಾ. ಉದಯ ಕುಮಾರ್‌ ಇರ್ವತ್ತೂರು ಅವರು ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರು. ತಂದೆ ನೇಮಿರಾಜ್‌ ಹಾಗೂ ತಾಯಿ ಮಾಲತಿ. ಮಂಗಳೂರಿನ ಹಂಪನಕಟ್ಟೆಯ ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ಸದ್ಯ ನಿವೃತ್ತರಾಗಿದ್ದಾರೆ. ಬರವಣಿಗೆ ಇವರ ನೆಚ್ಚಿನ ಹವ್ಯಾಸ. ಈವರೆಗೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳು; ವಾಣಿಜ್ಯ ಶಾಸ್ತ್ರ,- ಕನ್ನಡ ವಿಶ್ವವಿದ್ಯಾಲಯ ಹಂಪಿ, ಅಭಿವೃದ್ಧಿ: ವಾಸ್ತವ ಮತ್ತು ವಿಕಲ್ಪ, ಉಡುಪಿ ಜಿಲ್ಲೆ, ಸರ್ವೋದಯ ಮತ್ತು ಅಭಿವೃದ್ದಿ, ಗೆಲುವಿನ ದುಃಖ ಮತ್ತು ಸೋಲಿನ ಸುಃಖ ಇತ್ಯಾದಿ. ...

READ MORE

Related Books