ಲೇಖಕಿ ಡಾ. ಗೀತಾ ಕೃಷ್ಣಮೂರ್ತಿ ಅವರ ಕೃತಿ-ಮಹಿಳೆ ಸಮಾಜ ಕಾನೂನು. ಮಹಿಳೆಯರ ವಿರುದ್ಧ ನಡೆಯುತ್ತಿರುವ ಶೋಷಣೆ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕ್ರೌರ್ಯ, ಹೆಣ್ಣು ಭ್ರೂಣಹತ್ಯೆ, ಉದ್ಯೋಗ ಸ್ಥಳದಲ್ಲಿ ಕಿರುಕುಳ - ಹೀಗೆ ಮಹಿಳೆಯರ ಮೇಲಿನ ದೌರ್ಜನ್ಯಗಳು ನಡೆಯುತ್ತಿವೆ. ಹಕ್ಕುಗಳಿಗಾಗಿ ಮಹಿಳೆಯರು ಧ್ವನಿ ಎತ್ತಬೇಕು. ಮಾನಸಿಕ ಹಿಂಸೆ ವಿಚ್ಛೇದನಕ್ಕೆ ಆಧಾರ, ದತ್ತಕ, ಮಕ್ಕಳಿಲ್ಲದವರ ಬಾಳಿಗೆ ಆಧಾರ, ಹೆಣ್ಣುಮಕ್ಕಳಿಗೆ ಆಸ್ತಿಹಕ್ಕು, ಭ್ರೂಣಹತ್ಯೆ ಮತ್ತು ಸದ್ಯದ ಕಾನೂನು, ಸಮಾನ ಶ್ರಮಕ್ಕೆ ಸಮಾನ ವೇತನ ಇತ್ಯಾದಿ ಲೇಖನಗಳು ಮಹಿಳೆ ಎದುರಿಸುವ ಹಲವಾರು ಸಮಸ್ಯೆ ಹಾಗೂ ಸಂಬಂಧಿತ ಕಾನೂನು ಪರಿಹಾರಗಳತ್ತ ಈ ಕೃತಿಯು ಮಾಹಿತಿಯನ್ನು ನೀಡುತ್ತದೆ.
©2025 Book Brahma Private Limited.