‘ರಾಕೆಟ್: ಇತಿಹಾಸ, ವಿಜ್ಞಾನ-ತಂತ್ರಜ್ಞಾನ’ ಎಸ್. ಕೆ. ದಾಸ್ ಅವರ ಕೃತಿಯನ್ನು ಲೇಖಕ, ಭೂವಿಜ್ಞಾನಿ ಟಿ.ಆರ್. ಅನಂತರಾಮು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ರಾಕೆಟ್ ಕುರಿತು ಜನಸಾಮಾನ್ಯರಿಗೂ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಏಳುತ್ತವೆ. ರಾಕೆಟ್‍ನ್ನು ಅನ್ವೇಷಿಸಿದವರು ಯಾರು? ಅವೇಕೆ ನಮಗೆ ಬೇಕು? ಅವು ಕಾರ್ಯ ನಿರ್ವಹಿಸುವ ಬಗೆ ಹೇಗೆ? ಇವೆಲ್ಲವನ್ನೂ ಈ ಕೃತಿ ಅರ್ಥಪೂರ್ಣವಾಗಿ ವಿವರಿಸುತ್ತದೆ. ಇಲ್ಲಿ 75 ಪ್ರಶ್ನೆಗಳ ಮೂಲಕ ರಾಕೆಟ್ ಕುರಿತ ಅನೇಕ ಮಾಹಿತಿಗಳನ್ನು ನೀವು ಸುಲಭವಾಗಿ ಅರಿಯಬಹುದು. ಸರಿಯಾದ ಪ್ರಶ್ನೆಗಳಿಗೆ ಸರಿಯಾದ ಉತ್ತರವಿರುವುದು ಈ ಕೃತಿಯ ವಿಶೇಷ. ಇದನ್ನು ಓದಿ ಅರ್ಥಮಾಡಿಕೊಳ್ಳುವುದು ಸುಲಭ. ತಾಂತ್ರಿಕ ಪದಗಳ ಗೋಜಲಿಲ್ಲ. ಸರಳ ಭಾಷೆಯಲ್ಲಿ ಅನುವಾದ ಮಾಡಿದೆ. ಅಷ್ಟೇ ಅಲ್ಲ, ಮನೆಯಲ್ಲೇ ಕೂತು ಕೆಲವು ಪ್ರಯೋಗಗಳನ್ನು ನೀವೂ ಮಾಡಬಹುದು. ಅದಕ್ಕಾಗಿಯೇ ಈ ಕೃತಿಯಲ್ಲಿ ಒಂದು ಕೊನೆಯ ಅಧ್ಯಾಯವನ್ನು ಮೀಸಲಾಗಿಟ್ಟಿದೆ. ಇದರ ಜೊತೆ ಜೊತೆಗೆ ಅಂತರಿಕ್ಷ ಯುಗದ ಮಹತ್ವ, ಹಾಗೆಯೇ ಭಾರತದ ಅಂತರಿಕ್ಷ ಕಾರ್ಯಕ್ರಮಗಳ ಕುರಿತು ಆಕರ್ಷಕ ಮಾಹಿತಿಗಳಿವೆ.
©2024 Book Brahma Private Limited.