‘ಇಗ್ನೈಟೆಡ್ ಮೈಂಡ್ಸ್’ ಎಂಬುದು ಮಾಜಿ ರಾಷ್ಟ್ರಪತಿ ಹಾಗೂ ಕ್ಷಿಪಣಿ ತಜ್ಞ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಕೃತಿ. ಈ ಕೃತಿಯನ್ನು ಲೇಖಕ ಟಿ.ಎನ್. ಜಯಕೃಷ್ಣ ಅವರು ಪ್ರಜ್ವಲಿತ ದೀಪಗಳು’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತದ ಅಂತಃಶಕ್ತಿಯ ದರ್ಶನ ಇಲ್ಲಿದೆ. ಬೇರೆ ದೇಶಗಳಿಗಿಂತಲೂ ಭಾರತವು ವಿಶೇಷವಾಗಿ ಅಧ್ಯಾತ್ಮ ಸಾಧನೆಯಲ್ಲಿ ತನ್ನದೇ ಕೊಡುಗೆ ನೀಡಿದೆ ಎಂಬುದನ್ನು ಕಲಾಂ ನೆನಪಿಸುತ್ತಾರೆ. ಭಾರತದಲ್ಲಿ ಎಲ್ಲಾ ಬಗೆಯ ಸಾಮರ್ಥ್ಯ, ಪರಿಣತಿ, ಪ್ರತಿಭೆ, ಮೇಧಾಶಕ್ತಿ, ಸಂಪನ್ಮೂಲಗಳಿವೆ. ಆದರೂ, ಈ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಿಲ್ಲವೇಕೆ? ಎಲ್ಲಿ ತಪ್ಪಿದ್ದೇವೆ? ಎಂಬುದು ಡಾ. ಕಲಾಂ ಅವರ ಪ್ರಶ್ನೆಗಳು. ಪ್ರತಿಯೊಬ್ಬರು ಅಂತಃಶಕ್ತಿಯನ್ನು ಕಂಡುಕೊಳ್ಳುವ ಅಗತ್ಯ ಹಾಗೂ ಅನಿವಾರ್ಯತೆಯನ್ನು ಅವರು ಪ್ರತಿಪಾದಿಸುವ ಕೃತಿ ಇದು.
©2024 Book Brahma Private Limited.