‘ನಿಮ್ಮ ಸುಪ್ತಪ್ರಜ್ಞಾ ಮನಸ್ಸಿನ ಶಕ್ತಿ’ ಜೋಸೆಫ್ ಮರ್ಫಿ ಅವರ ಮೂಲ ಕೃತಿಯಾಗಿದ್ದು, ಶಿವಾನಂದ ಬೇಕಲ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕವು ಒಟ್ಟು 21 ಅಧ್ಯಾಯಗಳನ್ನು ಒಳಗೊಂಡಿದೆ. ಪ್ರತಿ ಅಧ್ಯಾಯವು ಚಮತ್ಕಾರಿ ಹಾಗೂ ನಮ್ಮ ಬದುಕಿನ ಬದಲಾವಣೆಗೆ ಅವಶ್ಯಕವಾದ ವಿಷಯಗಳನ್ನೇ ಹೇಳುತ್ತವೆ. ಮನಸ್ಸಿನಲ್ಲೂ ಎರಡು ವಿಧಗಳಿವೆ. ಒಂದು ಪ್ರಜ್ಞಾ ಮನಸ್ಸು ಇನ್ನೊಂದು ಸುಪ್ತಪ್ರಜ್ಞಾ ಮನಸ್ಸು. ಇವೆರಡರ ಕಾರ್ಯವೈಖರಿಯನ್ನು ಪುಸ್ತಕದುದ್ದಕ್ಕೂ ಹೇಳಲಾಗಿದೆ. ನಮ್ಮೊಳಗಿರುವ ಅಧಮ್ಯ ಶಕ್ತಿಯನ್ನು ಪುಟಿದೇಳಿಸುವ ಕಾರ್ಯವನ್ನು ನಮ್ಮ ಸುಪ್ತಶಕ್ತಿ ಮಾಡುತ್ತದೆ. ನಾವು ನಂಬಿರುವ ನಂಬಿಕೆಯೇ ನಮ್ಮೊಡನಿರುವ ಸುಪ್ತಶಕ್ತಿ. ನಮ್ಮ ಮನಸ್ಸಿನ ಮೂಲಕ ಏನನ್ನು ಹೇಳುತ್ತೆವೆಯೋ ಅದೇ ನಡೆಯುತ್ತದೆ. ಸಕಾರಾತ್ಮಕ ಅಂಶಗಳನ್ನು ಸುಪ್ತಮನಸ್ಸು ಹೇಗೆಲ್ಲ ಫಲಕಾರಿಯಾಗಿಸುತ್ತದೆ ಎಂಬುದನ್ನು ಪರಿಚಯಿಸಲಾಗಿದೆ. ಸುಪ್ತಪ್ರಜ್ಞಾ ಮನಸ್ಸು ಪ್ರತಿಯೊಬ್ಬ ಮನುಷ್ಯನಲ್ಲೂ ಇರುವ ಬಹುದೊಡ್ಡ ಮ್ಯಾಜಿಕ್ ಯಂತ್ರವಿದ್ದಂತೆ. ಅದರ ಸಮರ್ಪಕ ಬಳಕೆಯಿಂದ ಅದೆಷ್ಟೋ ಜನರು ವಿಜ್ಞಾನಿಗಳಾಗಿದ್ದಾರೆ, ಬಹುದೊಡ್ಡ ಸಂಗೀತಗಾರರಾಗಿದ್ದಾರೆ, ಒಬ್ಬ ಒಳ್ಳೆಯ ಉದ್ಯಮಿಯಾಗಿದ್ದಾರೆ, ಒಳ್ಳೆಯ ಲಾಯರ್ ಆಗಿದ್ದಾರೆ. ಹೀಗೆ ಅವರವರ ಮನದಾಸೆಯಂತೆ ಅವರು ಬಯಸಿದ ಬಯಕೆಗಳನ್ನು ಈಡೇರಿಸಿಕೊಂಡು ಸುಖಮಯವಾಗಿಯೂ ಇದ್ದಾರೆ ಎನ್ನುತ್ತದೆ ಈ ಕೃತಿ.
©2024 Book Brahma Private Limited.