ನಿಗೂಢ ಭಾರತದಲ್ಲೊಂದು ಹುಡುಕಾಟ

Author : ಗಿರಿಜಾ ಶಾಸ್ತ್ರಿ

Pages 414

₹ 250.00




Year of Publication: 2014
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು

Synopsys

ಲೇಖಕ ಪಾಲ್ ಬ್ರಂಟನ್ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು ಗಿರಿಜಾಶಾಸ್ತ್ರಿ ಅವರು ಕನ್ನಡಕ್ಕೆ ಅನುವಾದಿಸಿದ ಲೇಖನಗಳ ಸಂಗ್ರಹ ಕೃತಿ. ಭಾರತದ ಹಿರಿಮೆ-ಗರಿಮೆಯ ಎತ್ತರಗಳನ್ನು ತೋರುವ ಮೂಲಕ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆ ಕುರಿತ ಕೃತಿ. ಜ್ಞಾನಮೂಲದಿಂದ ಭಾರತವು ವಿಶ್ವಕ್ಕೆ ಮಾದರಿಯಾಗಿದ್ದು, ಬದುಕಿನ ಸಾರ್ಥಕತೆಯನ್ನು ಸರಳವಾಗಿ ಹೇಳಿದ್ದು, ಇದರಷ್ಟು ಶ್ರೀಮಂತ ಜ್ಞಾನ ಬೇರೆ ಯಾವ ಧರ್ಮದಲ್ಲೂ ಕಾಣಸಿಗದು. ವಿಶ್ವದ ವಿಶೇಷ ಜ್ಞಾನವನ್ನು ಬಗೆದಷ್ಟು ಆಳವಾಗುತ್ತಾ ಹೋಗುವ ಭಾರತೀಯ ಸಂಸ್ಕೃತಿಯು ವಿದೇಶಿಗರಿಗೆ ಅಚ್ಚರಿ ಮಾಡಿಸಿದ್ದು ಮಾತ್ರವಲ್ಲ; ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದಲೂ ಇಂತಹ ಅಪಾರ ಜ್ಞಾನ ಭಂಡಾರವನ್ನು ಹೇಗೆ ಒಳಗೊಂಡಿತು ಎಂಬ ಬಗ್ಗೆಯೂ ಅಚ್ಚರಿ ಮೂಡಿಸುತ್ತದೆ. ಇಂತಹ ಸಂಗತಿಗಳಿರುವ ಕೃತಿಯ ವಿಶೇಷತೆ.

About the Author

ಗಿರಿಜಾ ಶಾಸ್ತ್ರಿ
(16 September 1958)

ಗಿರಿಜಾ ಶಾಸ್ತ್ರಿ ಅವರು ಜನಿಸಿದ್ದು  1958 ಸೆಪ್ಟೆಂಬರ್ 16ರಂದು. ಮೂಲತಃ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದವರು. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಇವರು ಕನ್ನಡ ಬಳಗದ ಸ್ಮರಣ ಸಂಚಿಕೆ ಮುಂಬೆಳಕಿನ ಸಂಪಾದಕಿಯಾಗಿದ್ದರು. ಮುಂಬೈ ಲೇಖಕಿಯರ ಸಂಘದ ಸೂಜನಾಗೆ ’ಕಥೆ ಹೇಳೆ ಎಂಬ ಸಂಕಲನದ ಸಂಪಾದನೆ, ಮುಂಬೈ ಪತ್ರಿಕೆ ನೇಸರು ಸಂಪಾದಕಿಯಾಗಿದ್ದರು.  ಇವರು ಬರೆದ ಪ್ರಮುಖ ಕೃತಿಗಳೆಂದರೆ ಹೆಣ್ಣೊಬ್ಬಳ ದನಿ, ಕಥಾಮಾನಸಿ, ಆಧುನಿಕ ಕನ್ನಡ ಸಣ್ಣ ಕಥೆಗಳು, ಒಂದು ಸ್ತ್ರೀವಾದ ಅಧ್ಯಯನ ಮುಂತಾದವು ಇವರ ಪ್ರಮುಖ ಕೃತಿಗಳು. ಗಿರಿಜಾ ಶಾಸ್ತ್ರಿ ಅವರಿಗೆ ಹರಿಹರಶ್ರೀ ಪ್ರಶಸ್ತಿ, ಕುವೆಂಪು ಕಾವ್ಯ ಪ್ರಶಸ್ತಿ, ...

READ MORE

Related Books