ನಗ್ತಾ ನಲಿ ಅಳ್ತಾ ಕಲಿ

Author : ಗಂಗಾವತಿ ಪ್ರಾಣೇಶ್

Pages 168

₹ 150.00

Buy Now


Year of Publication: 2020
Published by: ಸಾವಣ್ಣ ಎಂಟರ್ ಪ್ರೈಸಸ್
Address: #57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು-560004

Synopsys

ಕೈಲಾಸಂ ಅವರ ಮಾತು; ಜೀವನದಲ್ಲಿ ನಡೆಯೋ ಘಟನೆಗಳನ್ನು ವಕ್ರದೃಷ್ಟಿಯಿಂದ ನೋಡಿದರೆ ಹಾಸ್ಯ ಹುಟ್ಟುತ್ತೆ, ಜೀವನವನ್ನೇ ವಕ್ರದೃಷ್ಟಿಯಿಂದ ನೋಡಿದರೆ ಆಧ್ಯಾತ್ಮ ಹುಟ್ಟುತ್ತೆ!  “ನಗ್ತಾ ನಲಿ ಅಳ್ತಾ ಕಲಿ" ಕೃತಿಯು ಈ ಮಾತನ್ನು ನೆನಪಿಸುತ್ತದೆ.

ಗಂಗಾವತಿ ಪ್ರಾಣೇಶರ ಪಂಚುಗಳು ಅವು ಹಾಸ್ಯವೇ ಆಗಿರಲಿ, ಜೀವನ ದರ್ಶನವೇ ಆಗಿರಲಿ, ಅವರಿಗೆ ದಕ್ಕಿರುವುದು ಅವರ ಜೀವನಾನುಭವ, ಪರಿಸರ ಮತ್ತು ದೇಶ-ವಿದೇಶಗಳ ಸುತ್ತಾಟಗಳಿಂದ. ಹಾಗೆ ಕಲಿತ ಪಾಠಗಳನ್ನು ಪಾಕ ಮಾಡಿ, ಭಟ್ಟಿ ಇಳಿಸಿಕೊಂಡು, ಗುಳಿಗೆ ಗುಳಿಗೆಯಾಗಿ ತಮ್ಮ ಹಾಸ್ಯ ಕಾರ್ಯಕ್ರಮಗಳ ಮೂಲಕ ಮತ್ತು ಲೇಖನಗಳ ಮೂಲಕ ಹಂಚಿಕೊಂಡು,, ತಾನು ಸವಿದ ಸವಿಯನ್ನು ಇತರರಿಗೂ ಹಂಚುವುದು ಅವರ ಕೈಂಕರ್ಯ  `ನೋಡಿದ್ದು ನೆನಪಿರುವುದಿಲ್ಲ, ಕೇಳಿದ್ದು ಕರುಳಿಗೆ ತಟ್ಟುತ್ತದೆ.' `ಪ್ರಶ್ನೆಗೆ ಉತ್ತರ ಯಾರನ್ನೂ ಕೇಳಬಾರದು; ಹುಡುಕಿಕೊಳ್ಳಬೇಕು.' `ಕಾಲಿಗೆ ಮೆಟ್ಟಿಲ್ಲದಿದ್ದರೂ, ಕೈನಲ್ಲಿರೋ ಮೊಬೈಲಿಗೆ ನೆಟ್ ಇಲ್ಲವೆಂದು ಮುಳ್ಳಿನ ಹಾದಿಯಲ್ಲಿ ನಡೆಯುವವರು' “ನಗ್ತಾ ನಲಿ ಅಳ್ತಾ ಕಲಿ" ಕೃತಿಯಲ್ಲಿ ಬರುವ ಇಂತಹ ಅನೇಕ ಮಾತುಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.`ನಗುವೇ ಅಂತಿಮವಲ್ಲ ಮಗುವೇ, ನಗುವಿನ ನಂತರದ ಚಿಂತನೆ ಮುಖ್ಯ'  ಎಂಬ  ಸಂದೇಶವನ್ನು ವಾಚ್ಯವಾಗಲ್ಲದೆ ಸೂಚ್ಯವಾಗಿ ತಿಳಿಸುವ ಕೃತಿ.

About the Author

ಗಂಗಾವತಿ ಪ್ರಾಣೇಶ್
(08 September 1961)

ಪ್ರಾಣೇಶ್ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಸೆಪ್ಟಂಬರ್ 8, 1961ರಲ್ಲಿ ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಯಲಬುರ್ಗಿಯಲ್ಲೂ, ಬಿ.ಕಾಂ. ಪದವಿಯನ್ನು ಗಂಗಾವತಿಯಲ್ಲೂ ಪೂರೈಸಿದರು. ಪ್ರಾಣೇಶ್ ಅವರ ತಂದೆ ಸ್ವಾತಂತ್ರ್ಯ ಯೋಧ  ಬಿ.ವೆಂಕೋಬಾಚಾರ್ಯರು, ಶಾಲಾ ಶಿಕ್ಷಕರಾಗಿದ್ದರು. ತಾಯಿ ಸತ್ಯವತಿ ಬಾಯಿ. ತಾಯಿಯಿಂದ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡವರು.  ಹಾಸ್ಯಕ್ಕಷ್ಟೇ ಸೀಮಿತವಾದ ಪ್ರಾಣೇಶ್ ನಗಿಸುವವನ ನೋವುಗಳು, ನಗ್ತಾ ನಲಿ ಅಳ್ತಾ ಕಲಿ, ಪಂಚ್‌ ಪಕ್ವಾನ್ನ ಮುಂತಾದ ಪುಸ್ತಕಗಳನ್ನು ರಚಿಸಿದ್ದಾರೆ. ಜೊತೆಗೆ ಹಲವಾರು ಕ್ಯಾಸೆಟ್, ಸಿಡಿಗಳನ್ನೂ ಹೊರತಂದಿದ್ದಾರೆ. ಯೂ ಟ್ಯೂಬ್ ನಂತಹ ಅಂತರ್ಜಾಲ ಮಾಧ್ಯಮಗಳಲ್ಲಿ ಅವರ ಹಲವಾರು ಕಾರ್ಯಕ್ರಮಗಳ ತುಣುಕುಗಳು ನಿರಂತರವಾಗಿ ಜನಪ್ರೀತಿಯನ್ನು ಸಂಪಾದಿಸುತ್ತಿವೆ. ...

READ MORE

Related Books