ಆರತಿ ಘಟಿಕಾರ್ ಅವರ ಹಾಸ್ಯ ಬರಹಗಳ ಸಂಕಲನ "ಮಾತ್ರೆ ದೇವೋ ಭವ". ಹನಿಗವನಗಳ ಮೂಲಕ ನಗೆ ಚಟಾಕಿ ಹಾರಿಸುತ್ತಿದ್ದ ಲೇಖಕಿ ಇಲ್ಲಿ ಮೊಟ್ಟಮೊದಲ ಬಾರಿಗೆ ಲಲಿತ ಪ್ರಬಂಧ ರಚಿಸುವ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ಲೇಖಕಿಯು ಕೆಲವರ್ಷಗಳ ಕಾಲ ದೂರದ ದುಬೈನಲ್ಲಿ ವಾಸವಿದ್ದ ಸಂದರ್ಭದಲ್ಲಿ ಮನೆ, ಕಚೇರಿ, ಮಾರುಕಟ್ಟೆ, ನೆರೆಹೊರೆಯವರಲ್ಲಿ ಘಟಿಸಿದ ಹಾಸ್ಯ ಪ್ರಸಂಗಗಳನ್ನು ತಮ್ಮದೇ ಶೈಲಿಯಲ್ಲಿ ಒಂದೊಂದು ಗುಳಿಗೆಗಳಾಗಿ ಓದುಗರಿಗೆ ಉಣ ಬಡಿಸಿದ್ದಾರೆ.
ಪ್ರಸ್ತುತ "ಮಾತ್ರೆ ದೇವೋ ಭವ" ಸಂಕಲನದಲ್ಲಿ ಅಡುಗೆ, ಅತಿಥಿಗಳ ಉಪಚಾರ, ಡಯಟ್, ಶಾಪಿಂಗ್, ಸಾಮಾಜಿಕ ಜಾಲತಾಣ, ಕ್ಲೀನಿಂಗ್ ಟಿಪ್ಸ್, ಮನೆಗೆಲಸದ ಅಚ್ಚುಕಟ್ಟುತನ, ಕೆಲಸದವರ ಮೂಗು ತೂರಿಸುವಿಕೆ, ಹಣಕಾಸಿನ ನಿರ್ವಹಣೆ, ಪ್ರವಾಸ, ವಿದೇಶ ವಾಸ, ಮಕ್ಕಳ ಬುದ್ಧಿವಂತಿಕೆ ಇದರೊಂದಿಗೆ ತಮ್ಮ ಜೀವನದಲ್ಲಿ ತಾವು ಮಾಡಿಕೊಂಡ ಯಡವಟ್ಟು, ಅನುಭವಿಸಿದ ಪಜೀತಿ, ಪೀಕಲಾಟಗಳನ್ನೆಲ್ಲ ನವಿರು ಹಾಸ್ಯದ ಮೂಲಕ ಸೊಗಸಾಗಿ ವರ್ಣಿಸಿದ್ದಾರೆ.
©2024 Book Brahma Private Limited.