ಮಾತ್ರೆಗಳು

Author : ಬೀchi

Pages 40

₹ 96.00




Year of Publication: 2013
Published by: ಸಮಾಜ ಪುಸ್ತಕಾಲಯ
Address: ಸಮಾಜ ಪುಸ್ತಕಾಲಯ, ಶಿವಾಜಿ ರೋಡ್, ಧಾರವಾಡ
Phone: 8762102715

Synopsys

ಬೀಚಿಯವರೇ ಹೇಳಿಕೊಂಡಂತೆ ಇದು ರಾಜರತ್ನಂ ಅವರ ’ರತ್ನನ ಪದಗಳು’ ಕೃತಿಯಿಂದ ಪ್ರಭಾವಿತವಾದ ಮೂವತ್ತೇಳು ಹಾಸ್ಯ ಲೇಖನಗಳ ಗುಚ್ಛ.

ಹಾಸ್ಯಕತೆಗಳ ರೂಪದಲ್ಲಿಯೂ ಇರುವ ಇವುಗಳ ಬಗ್ಗೆ ಕೃತಿಕಾರ ವಿಶೇಷ ಆಸ್ಥೆಯಿಂದ ಹೇಳಿಕೊಂಡಿರುವುದು ಹೀಗೆ: ’...ಇವುಗಳ ಬೆನ್ನುರಿಯಲ್ಲಿ ನಗುವನ್ನು ಕಾಣಬಹುದು. ತನ್ನನ್ನು ಕಂಡು ತಾನೇ ನಗುವುದು ಆತ್ಮ ಸಾಕ್ಷಾತ್ಕಾರದ ಸೋಪಾನ. ಸತ್ಯದ ದಿಕ್ಕಿನಲ್ಲಿ ಮುಂದಿಕ್ಕಿದ ದೊಡ್ಡದೊಂದು ಹಚ್ಚಿ ಈ ನಗುವಿನಲ್ಲಿ ತನ್ನದೇ ಆದ ವೈಶಿಷ್ಟ್ಯವಿದೆ. ಇದರ ಹೊರಮೈ ನಗುವುದಾದರೆ ಒಳಮ್ಮೆ ಅಳು'.

About the Author

ಬೀchi
(23 April 1913 - 07 December 1980)

'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...

READ MORE

Related Books