ಮಂಕರು ಬೆಪ್ಪರು

Author : ಎಂ. ಶಿವರಾಂ (ರಾಶಿ)

₹ 57.00




Year of Publication: 2006
Published by: ವಿವಿದ್‌ಲಿಪಿ
Address: 71, 4ನೇ ಕ್ರಾಸ್‌, ಕಾನ್‌ಕರ್ಡ್‌ ಲೇಔಟ್‌, ರಾಜರಾಜೇಶ್ವರಿ ನಗರ, ಬೆಂಗಳೂರು– 560059
Phone: 9535015489

Synopsys

ಲೇಖಕ ಡಾ. ಎಂ. ಶಿವರಾಂ ಅವರ ನಗೆ ಬರಹಗಳ ಸಂಕಲನ ಕೃತಿ ʼಮಂಕರು ಬೆಪ್ಪರುʼ. ರಾ.ಶಿ. ಎಂದೇ ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರಾದ ಇವರು, ಕನ್ನಡ ಸಾರಸ್ವತಲೋಕವನ್ನು ಹಾಸ್ಯಬರಹಗಳಿಂದಲೂ ಗಂಭೀರಸಾಹಿತ್ಯದಿಂದಲೂ ಶ್ರೀಮಂತಗೊಳಿಸಿದವರು. ಈ ಪುಸ್ತಕವು ರಾ.ಶಿ.ಯವರ “ತುಟಿ ಮೀರಿದುದು” ಹಾಗೂ “ನಗು ಸರಸಿ ಅಪ್ಸರೆಯರು” ಇವುಗಳಿಂದ ಆಯ್ದ ಲೇಖನಗಳ ಸಂಗ್ರಹವಾಗಿದೆ. ಇವರ ಬರಹಗಳು ಇವರ ಹಾಸ್ಯಪ್ರಜ್ಞೆಯ ಒಂದು ಮುಖವಾಗಿದೆ.

About the Author

ಎಂ. ಶಿವರಾಂ (ರಾಶಿ)
(10 November 1905 - 13 January 1984)

ಲೇಖಕ ಎಂ.ಶಿವರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ರಾಮಸ್ವಾಮಯ್ಯ. ತಾಯಿ- ಸೀತಮ್ಮ. ಬೆಂಗಳೂರಿನಲ್ಲಿಯೇ ಶಿಕ್ಷಣ ಪಡೆದ ಅವರು ಎಂ.ಬಿ.ಬಿ.ಎಸ್ ಓದುತ್ತಿರುವಾಗಲೇ ತಂದೆ ತೀರಿಕೊಂಡಿದ್ದರಿಂದ ಸಂಸಾರದ ಜವಾಬ್ದಾರಿ ಹೊರಬೇಕಾಯ್ತು. ಈ ವೇಳೆ ಸಾಹಿತಿ ಕೈಲಾಸಂ ಅವರು ವೈದ್ಯರಾಗಿ ಸೇವೆಸಲ್ಲಿಸುವಂತೆ ಸಲಹೆ ನೀಡಿದ್ದರು. ಈ ಕಾರಣದಿಂದಾಗಿಯೇ ಬೆಂಗಳೂರು ಮೆಡಿಕಲ್ ಕಾಲೇಜು ಸ್ಥಾಪಿಸಿದ ಶಿವರಾಂ ಅವರು ಕೈಗಾರಿಕೋದ್ಯಮದಲ್ಲೂ ಸೇವೆ ಸಲ್ಲಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳೊಡನಾಟವಿದ್ದ ಅವರು ಇಂಡಸ್ಟ್ರಿಯಲ್ ಟೆಸ್ಟಿಂಗ್ ಲ್ಯಾಬೋರೇಟರಿಯ ನಿರ್ದೇಶಕರಾಗಿ, ಕಿರ್ಲೋಸ್ಕರ್ ಕಾರ್ಖಾನೆಯ ನಿರ್ದೇಶಕರಾಗಿ, ಮೈಸೂರು ಲ್ಯಾಂಪ್ಸ್, ಇಂಡಿಯನ್ ಆಕ್ಸಿಜನ್ ಕಂಪನಿಗಳ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೈಸೂರು ಕ್ಯಾನ್ಸರ್ ಸೊಸೈಟಿ ...

READ MORE

Related Books